ಬಿಜೆಪಿ ಪಂಚಾಯತ್ ಯಾತ್ರೆ: ಹಿರಿಯ ಕಾರ್ಯಕರ್ತರ ಮನೆಗೆ ನೇತಾರರ ತಂಡ ಭೇಟಿ

ಉಪ್ಪಳ: ಬಿಜೆಪಿ ಪಂಚಾಯತ್ ಯಾತ್ರೆ ಯ ಅಂಗವಾಗಿ ಮಂಗಲ್ಪಾಡಿ ದಕ್ಷಿಣ ವಲಯದ ಸಂಘ ಪರಿವಾರದ ಹಿರಿಯ ಕಾರ್ಯಕರ್ತರ ಮನೆಗೆ ಭೇಟಿ ನೀಡಲಾಯಿತು. ಅಂಬಾರ್ ಶ್ರೀ ಸದಾಶಿವ ದೇವಸ್ಥಾನಕ್ಕೆ, ಪದ್ಮನಾಭ ಶೆಟ್ಟಿ ಮೀನಾರು, ರಾಮಚಂದ್ರ ಸಿ, ಬಾಬು ಪೂಜಾರಿ, ಬಾಬು ಪೂಜಾರಿ ಅಂಬಾರು, ಸಂಘದ ಹಿರಿಯರಾದ ಗೋಪಾಲ ಚೆಟ್ಟಿಯಾರ್, ಬಿ.ಎಂ. ಗುರುವ, ಸಿ ಟಿ ಹೆಬ್ಬಾರ್ ಹೇರೂರ್, ಜಯಲಕ್ಷ್ಮಿ ಮಯ್ಯ ತಾಡ, ಎಂ ಆರ್ ಕೊರಗಪ್ಪ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಕುಬಣೂರು ಹರೀಶ್ ಮಾಸ್ಟರ್, ವೀರ ನಗರದಲ್ಲಿ ಕ್ರೆÊಸ್ತ ಬಾಂಧವರ ಮನೆಗೆ, ಗೋಪಾಲ್ ಮೊದಲಾದವರ ಮನೆಗೆ ಭೇಟಿ ಮಾಡಲಾಯಿತು, ನಂತರ ಪಂಚಾಯತ್ ಸಮಿತಿ ಪದಾಧಿಕಾರಿ ಗಳ ಸಭೆ ನಡೆಸಲಾಯಿತು, ಕಾರ್ಯ ಕ್ರಮದಲ್ಲಿ ಮಹಿಳಾ ಮೋರ್ಚಾ ರಾಷ್ಟ್ರೀಯ ನಾಯಕಿ, ಬ್ಲಾಕ್ ಪಂಚಾ ಯತ್ ಸದಸ್ಯೆ ಅಶ್ವಿನಿ ಪಜ್ಜಾ ಎಂ ಎಲ್, ಬಿಜೆಪಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ ಮಯ್ಯ, ಬಿಜೆಪಿ ಸಮಿತಿ ಅಧ್ಯಕ್ಷ ರಾಮಚಂದ್ರ ಬಲ್ಲಾಳ್, ಬಾಲಕೃಷ್ಣ ಅಂಬಾರು, ಪಂಚಾಯತ್ ಸದಸ್ಯೆ ರೇವತಿ. ಕೆ, ಪ್ರಧಾನ ಕಾರ್ಯ ದರ್ಶಿ ಕಿಶೋರ್ ಕುಮಾರ್ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

You cannot copy contents of this page