ಪೈವಳಿಕೆ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸದಸ್ಯ ಕೆ.ಪಿ. ಪ್ರಶಾಂತ್‌ರನ್ನು ಪಕ್ಷದಿಂದ ಹೊರ ಹಾಕಿದ ಜಿಲ್ಲಾಧ್ಯಕ್ಷೆಯ ಕ್ರಮಕ್ಕೆ ಪಕ್ಷದ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಬಗ್ಗೆ ತಿಳಿದು ಬಂದಿದೆ. ಕಳೆದ 30 ವರ್ಷಗಳಿಂದ ಪಕ್ಷದಲ್ಲಿ ದುಡಿಯುತ್ತಿರುವ ಸಕ್ರಿಯ ಕಾರ್ಯ ಕರ್ತನನ್ನು ಅಮಾನತುಗೊಳಿಸಿರುವುದಕ್ಕೆ ಪೈವಳಿಕೆ ಪಂಚಾಯತ್ ಹಾಗೂ ಮಂ ಡಲದ ವಿವಿಧ ಭಾಗಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಜೋಡು ಕಲ್ಲಿನಲ್ಲಿ ಬಿಜೆಪಿ ನೇತಾರರ ಹಾಗೂ ಕಾರ್ಯಕರ್ತರ ಸಭೆ ನಡೆದಿದ್ದು, ಅದರಲ್ಲಿ ಕೆ.ಪಿ. ಪ್ರಶಾಂತ್ ವಿರುದ್ಧ ಕೈಗೊಂಡ ಅಮಾನತು ಕ್ರಮವನ್ನು ಹಿಂತೆಗೆಯಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಪ್ರಶಾಂತ್‌ರ ವಿರುದ್ಧ ಕೈಗೊಂಡ ಅಮಾನತು ಕ್ರಮವನ್ನು ಹಿಂತೆಗೆಯದಿದ್ದಲ್ಲಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆಯೂ ಚರ್ಚಿಸಲಾಯಿತೆಂದು ತಿಳಿದು ಬಂದಿದೆ. ಸಭೆಯಲ್ಲಿ ಕೆ.ಪಿ. ನಾರಾಯಣ ಪಟ್ಲ, ಪ್ರಶಾಂತ್ ಪಟ್ಲ, ಪ್ರಕಾಶ್ ತಪೋವನ, ಪ್ರಕಾಶ್ ಹೊಸನಗರ, ಹೇಮಂತ್ ಆಚಾರ್ಯ, ಶಶಾಂಕ್ ಜೋಡುಕಲ್ಲು ಮೊದಲಾದವರು ಭಾಗವಹಿಸಿದರು.
