ಬಿಜೆಪಿ ಸದಸ್ಯತ್ವ ಅಭಿಯಾನ: ಜಾಗತಿಕ ಸಂಘಟನಾ ಶಕ್ತಿಯಾಗಿ ಬಿಜೆಪಿ-ಬಾಲಕೃಷ್ಣ ಶೆಟ್ಟಿ 

ಹೊಸಂಗಡಿ: ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿಯ ಸದಸ್ಯತ್ವ ಅಭಿಯಾನ ಮತ್ತೆ ಸೆಪ್ಟಂಬರ್ ೧ರಿಂದ ಆರಂಭವಾಗಲಿದೆ. ದೇಶದಲ್ಲಿ ೩೫ ಕೋಟಿ ಸದಸ್ಯತ್ವ ಗುರಿ ಬಿಜೆಪಿ ಈ ಬಾರಿ ಹೊಂದಿದೆ,. ರಾಜ್ಯದಲ್ಲಿ ೪೫ ಲಕ್ಷ ಸದಸ್ಯತ್ವ ಗುರಿ ಮುಟ್ಟಲಿದೆಯೆಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ಸದಸ್ಯತ್ವ ಕಾರ್ಯಾಗಾರವನ್ನು ನಿನ್ನೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸದಸ್ಯತ್ವ ಪಡೆದವರು ಪಕ್ಷಕ್ಕೆ ವಿನೀತರಾಗುವ ಕಾರ್ಯಕರ್ತ ರಾಗಬೇಕು ಆಗ ಪಕ್ಷದ ಬೆಳವಣಿಗೆ ಆಗುತ್ತದೆ ಎಂದರು. ಬಿಜೆಪಿ ಮಂಜೇಶರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ರಾಜ್ಯ ಎಸ್‌ಸಿ ಮೋರ್ಛಾ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಪ್ರಸಾದ್ ರೈ, ಜಯಲಕ್ಷ್ಮಿ ಭಟ್, ಯಾದವ ಬಡಾಜೆ, ಸುಬ್ರಹ್ಮಣ್ಯ ಭಟ್, ನಾರಾಯಣ ನಾಯ್ಕ್, ಭಾಸ್ಕರ್ ಪೊಯ್ಯೆ, ಲೋಕೇಶ್ ನೋಂಡ, ಪುಷ್ಪಾಲಕ್ಷ್ಮಿ ಆಶಾಲತಾ ಪೆಲಪ್ಪಾಡಿ ಹಾಗೂ  ಚುನಾಯಿತ ಸದಸ್ಯರು, ಮೋರ್ಛಾ ನೇತಾರರು ಉಪಸ್ಥಿತರಿದ್ದರು. ಯತಿರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ. ಭಟ್ ವಂದಿಸಿದರು.

You cannot copy contents of this page