ಬಿಲ್ಲುಗಾರಿಕೆ: ಭಾರತಕ್ಕೆ ಚಿನ್ನ
ಹ್ಯಾಂಗ್ಚೌ: ೨೦೨೩ರ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ೧೯ನೇ ಚಿನ್ನದ ಪದಕ ಲಭಿಸಿದೆ. ಬಿಲ್ಲು ಎಸೆತ ಸ್ಪರ್ಧೆಯಲ್ಲಿ ಮಹಿಳೆಯರ ಕಾಂಪೌಂಡ್ ಟೀಂ ವಿಭಾಗದಲ್ಲಿ ಜ್ಯೋತಿರೇಖಾ, ಅತಿಥಿ ಗೋಪಿಚಂದ್ಸ್ವಾಮಿ, ಫರ್ನೀತ್ ಕೌರ್ ಎಂಬಿವರು ಸೇರಿದ ತಂಡಕ್ಕೆ ಚಿನ್ನ ಲಭಿಸಿರುವುದು. ಫೈನಲ್ ಸ್ಪರ್ಧೆಯಲ್ಲಿ ಚೈನೀಸ್ ತಾಯ್ಪೇಯ್ ತಂಡವನ್ನು ೨೩೦-೨೨೯ ಎಂಬ ಸ್ಕೋರ್ನಿಂದ ಹಿಂದಿಕ್ಕಿ ಭಾರತ ತಂಡ ಕಿರೀಟ ಗಳಿಸಿದೆ. ಪ್ರಥಮ ಸುತ್ತಿನಲ್ಲಿ ಹಾಗೂ ಮೂರನೇ ಸುತ್ತಿನಲ್ಲಿ ಹಿಂದಿದ್ದ ಭಾರತ ಮತ್ತೆ ಪುಟಿದೆದ್ದಿದೆ. ಇದರೊಂದಿಗೆ ಭಾರತಕ್ಕೆ ೧೯ ಚಿನ್ನ ಮತ್ತು ೩೧ ಬೆಳ್ಳಿ, ೩೨ ಕಂಚಿನ ಪದಕ ಸೇರಿ ಒಟ್ಟು ೮೨ ಪದಕ ಲಭಿಸಿದೆ.