ಬಿ.ಇ.ಎಂ ಹೈಸ್ಕೂಲ್‌ನ ನಿವೃತ್ತ ಮುಖ್ಯೋಪಾಧ್ಯಾಯ ಎನ್. ರಾಮದಾಸ್ ಕಾಮತ್ ನಿಧನ
ಕಾಸರಗೋಡು: ಕಾಸರಗೋಡು ಬಿಇಎಂ ಹೈಸ್ಕೂಲ್‌ನ ನಿವೃತ್ತ ಮುಖ್ಯೋಪಾಧ್ಯಾಯ ಶತಾಯುಷಿ ಉಡುಪಿ ವೆಂಕಟ್ರಮಣ ದೇವಸ್ಥಾನ ಬಳಿ ವಾಸಿಸುತ್ತಿದ್ದ ಎನ್. ರಾಮದಾಸ್ ಕಾಮತ್ (106) ನಿಧನಹೊಂ ದಿದ್ದಾರೆ. ಇವರು ಕಾಸರಗೋಡು ಬಿಇಎಂ ಹೈಸ್ಕೂಲ್‌ನಲ್ಲಿ ೨೫ ವರ್ಷಗಳ ತನಕ ಅಧ್ಯಾಪಕರಾಗಿ ಬಳಿಕ ಏಳು ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 1997ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಆ ಬಳಿಕ ಅವರು ಉಡುಪಿಯಲ್ಲಿರುವ ಪುತ್ರನ ಮನೆಯಲ್ಲಿ ವಾಸ ವಾಗಿದ್ದರು.
ಮೃತ ರಾಮದಾಸ್ ಓರ್ವ ಉತ್ತಮ ಅಧ್ಯಾಪಕರು ಮಾತ್ರವಲ್ಲದೆ ಶ್ರೇಷ್ಠ ಸಂಗೀತ ವಿದ್ವಾಂಸರೂ ಆಗಿದ್ದರು. ಖ್ಯಾತ ಸಂಗೀತಜ್ಞ ರಾಮ್‌ರಾವ್ ನಾಯ್ಕರ ಸಂಗೀತ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಂ ವಾದಕರಾಗಿಯೂ ಹಲವು ಬಾರಿ ಸಾಥ್ ನೀಡಿದ್ದರು. ಜಲತರಂಗ ಸಂಗೀತದಲ್ಲೂ ಇವರು ತಜ್ಞರಾಗಿದ್ದರು.
ಕರ್ನಾಟಕ ವಿಧಾನಸಭೆಗೆ ಕಳೆದ ವರ್ಷ ಚುನಾವಣೆ ನಡೆದಾಗ ರಾಮದಾಸ್ ಕಾಮತ್ ತಮ್ಮ 102ನೇ ವಯಸ್ಸಿನಲ್ಲೂ ಉಡುಪಿ ಮತಗಟ್ಟೆಗೆ ತೆರಳಿ ಲವಲವಿಕೆಯಿಂದ ಮತ ಚಲಾಯಿಸಿದ್ದರು. ಮೃತರ ಪತ್ನಿ ಕಸ್ತೂರಿ ಕಾಮತ್ 12 ವರ್ಷಗಳ ಹಿಂದೆ ನಿಧನಹೊಂದಿದ್ದಾರೆ.
ಮಕ್ಕಳಾದ ಪ್ರಶಾಂತ್ ಕಾಮತ್ (ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ), ಅಜಿತ್ ಕಾಮತ್ (ಚಾರ್ಟ ಡ್ ಅಕೌಂಟೆಂಟ್), ಗೋಕುಲ ಕಾಮತ್ (ಇಂಜಿನಿಯರ್) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ರಾಮ ದಾಸ್ ಕಾಮತ್‌ರ ನಿಧನಕ್ಕೆ ಕಾಸರ ಗೋಡಿನ ಅವರ ವಿದ್ಯಾರ್ಥಿ ಸಮೂಹ ಹಾಗೂ ಅಧ್ಯಾಪಕ ಸಮುದಾಯ ಸೇರಿದಂತೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.