ಬೀಚ್ ರಸ್ತೆಗೆ ಜಸ್ಟೀಸ್ ಯು.ಎಲ್. ಭಟ್‌ರ ಹೆಸರು ನೀಡಲು ಸಿಪಿಐ ಒತ್ತಾಯ
ಕಾಸರಗೋಡು: ಕಾಸರಗೋಡಿನಲ್ಲಿ ಈ ಹಿಂದೆ ರಾಜಕೀಯ, ಸಾಂಸ್ಕೃತಿಕ ವಲಯಗಳಲ್ಲಿ ಖ್ಯಾತರಾಗಿದ್ದ ಪಂಚಾಯತ್ ಅಧ್ಯಕ್ಷ ಹಾಗೂ ಕಾಸರಗೋಡು ಪಂಚಾಯತ್‌ನ್ನು ನಗರಸಭೆಯಾಗಿ ಭಡ್ತಿಗೊಳಿಸಿದಾಗ ಅಡ್ವೈಸರಿ ಬೋರ್ಡ್ ಚೆಯರ್‌ಮೆನ್ ಆಗಿದ್ದ ದಿ| ಜಸ್ಟೀಸ್ ಯು.ಎಲ್. ಭಟ್‌ರ ಸ್ಮರಣೆಯನ್ನು ಚಿರಸ್ಥಾಯಿಗೊಳಿ ಸಲು ಅವರ ಕಚೇರಿ ಕಾರ್ಯಾ ಚರಿಸುತ್ತಿದ್ದ ಬೀಚ್ ರಸ್ತೆಗೆ ಜಸ್ಟೀಸ್ ಯು.ಎಲ್. ಭಟ್ ರಸ್ತೆ ಎಂದು ನಾಮಕರಣ ಗೈಯ್ಯಬೇಕೆಂದು ಸಿಪಿಐ ಮಂಡಲ ಸಮ್ಮೇಳನ ನಗರಸಭೆಯೊಂ ದಿಗೆ ಆಗ್ರಹಿಸಿದೆ.
ನಿರ್ಮಾಣದ ಕುಂದುಕೊರತೆ ಗಳನ್ನು ಪರಿಹರಿಸಿ ಅಪಾಯರಹಿತವಾದ ರೀತಿಯಲ್ಲಿ ಹೆದ್ದಾರಿ ನಿರ್ಮಾಣ ಪೂರ್ತಿಗೊಳಿಸಬೇಕು, ಸರಕಾರಿ ಆಸ್ಪತ್ರೆಗಳಲ್ಲಿ ಡಾಕ್ಟರ್‌ಗಳು ಹಾಗೂ ಇತರ ನೌಕರರ, ತಪಾಸಣಾ ಸಾಮಗ್ರಿಗಳ ಕೊರತೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಲಾಯಿತು. ಕಾಸರಗೋಡಿನಿಂದ ಕರ್ನಾಟಕದ ವಿವಿಧ ನಗರಗಳಿಗೆ ಹಾಗೂ ಪ್ರವಾಸಿ ಕೇಂದ್ರಗಳಿಗೆ ಪ್ರಯಾಣ ಸುಲಭಗೊಳಿಸುವ ರೀತಿ ಯಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚು ಅಂತಾ ರಾಜ್ಯ ರೂಟ್‌ನಲ್ಲಿ ಸಂಚಾರ ಆರಂಭಿಸ ಬೇಕೆಂದು ಸಮ್ಮೇಳನದಲ್ಲಿ ಒತ್ತಾಯಿ ಲಾಯಿತು. ಸಮ್ಮೇಳನದಲ್ಲಿ ಕೆ. ಕುಂಞಿ ರಾಮನ್, ರಾಜ್ಯ ಅಸಿಸ್ಟೆಂಟ್ ಸೆಕ್ರೆಟರಿ, ಶಾಸಕ ಇ. ಚಂದ್ರಶೇಖರನ್, ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು, ರಾಜ್ಯ ಕೌನ್ಸಿಲ್ ಸದಸ್ಯರಾದ ಟಿ. ಕೃಷ್ಣನ್, ಗೋವಿಂದನ್ ಪಳ್ಳಿಕಾಪಿಲ್, ಜಿಲ್ಲಾ ಅಸಿಸ್ಟೆಂಟ್ ಸೆಕ್ರೆಟರಿ, ವಿ. ರಾಜನ್, ಜಿಲ್ಲಾ ಎಕ್ಸಿಕ್ಯೂಟಿವ್ ಸದಸ್ಯರಾದ ಬಂಗಳಂ ಕುಂಞಿಕೃಷ್ಣನ್, ಕೆ.ವಿ. ಕೃಷ್ಣನ್, ಎಂ. ಕುಮಾರನ್, ವಿ. ಸುರೇಶ್ ಬಾಬು, ಪಿ.ಪಿ. ಚಾಕೊ, ರಾಧಾಕೃಷ್ಣನ್ ಪೆರುಂಬಳ ಮಾತನಾಡಿದರು. ನೂತನ ಮಂಡಲ ಸಮಿತಿ ಕಾರ್ಯದರ್ಶಿಯಾಗಿ ಬಿಜು ಉಣ್ಣಿತ್ತಾನ್ ಹಾಗೂ 17 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜುಲೈ 11, 12, 13ರಂದು ವೆಳ್ಳರಿಕುಂಡ್‌ನಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ.