ಕಾಸರಗೋಡು: ನಗರಸಭೆ ಕುಟುಂಬಶ್ರೀ, ರಾಷ್ಟ್ರೀಯ ನಗರ ಉಪಜೀವನ ಮಿಷನ್ ಆಶ್ರಯದಲ್ಲಿ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆರಂಭಿಸಿದ ಬೀದಿಬದಿ ವ್ಯಾಪಾರ ಮಾರುಕಟ್ಟೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದರು. ಕುಟುಂಬಶ್ರೀ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಚ್. ದಿನೇಶನ್ ಮುಖ್ಯ ಅತಿಥಿಯಾಗಿದ್ದರು.
ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಹೀರ್ ಆಸಿಫ್, ಆರ್. ರೀತಾ, ಖಾಲಿದ್ ಪಚ್ಚಕ್ಕಾಡ್, ಆರ್. ರಜನಿ, ಯೋಜನಾ ಸಮಿತಿ ಉಪಾಧ್ಯಕ್ಷ ಎ. ಅಬ್ದುಲ್ ರಹ್ಮಾನ್, ಕೌನ್ಸಿಲರ್‌ಗಳಾದ ಕೆ.ಜಿ. ಪವಿತ್ರ, ಪಿ. ರಮೇಶ್, ಎಂ. ಲಲಿತ, ಸಿದ್ದಿಕ್, ವರಪ್ರಸಾದ್ ಕೋಟೆಕಣಿ, ಕುಟುಂಬಶ್ರೀ ಅಸಿಸ್ಟೆಂಟ್ ಜಿಲ್ಲಾ ಮಿಷನ್ ಕೋ-ಆರ್ಡಿನೇಟರ್ ಡಿ. ಹರಿದಾಸ್, ಆಯಿಷಾ ಇಬ್ರಾಹಿಂ, ನಳಿನಾಕ್ಷನ್, ತಿಪ್ಪೇಶ್, ಅಶ್ರಫ್ ಎಡನೀರು, ಟಿ.ಪಿ. ಇಲ್ಯಾಸ್, ಮೋಹನ್ ನಾಯ್ಕ್ ಭಾಗವಹಿಸಿದರು. ಡಿ.ವಿ. ಅಬ್ದುಲ್ ಜಲೀಲ್ ಸ್ವಾಗತಿಸಿ, ಬಿನೀಶ್ ಜೋಯ್ ವಂದಿಸಿದರು.