ಮಂಜೇಶ್ವರ : ಬೀದಿ ನಾಯಿಗಳ ಅಟ್ಟಹಾಸ ಮಿತಿ ಮೀರಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ನಾಯಿಗಳ ಉಪಟಳದಿಂದ ಜನರಿಗೆ ಮನೆಯಿಂದ ಹೊರಗಿಳಿಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದಾಗಿ ದೂರಲಾಗಿದೆ. ಬೀದಿ ಗಳಲ್ಲಿ ನಾಯಿಗಳು ಗುಂಪು ಗುಂಪಾಗಿ ಜನರನ್ನು ಬೆನ್ನಟ್ಟುತ್ತಿದೆ. ಆದರೆ ಅಧಿಕಾರಿಗಳು ಮೌನವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಜಾನೆ ಮದ್ರಸಕ್ಕೆ ತೆರಳುವ ವಿದ್ಯಾರ್ಥಿಗಳ ಮೇಲೂ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಇದರ ಜೊತೆಯಾಗಿ ಆಡು ಹಾಗೂ ಹಸುಗಳು ಕೂಡಾ ನಾಯಿಯ ದಾಳಿಗೆ ಬಲಿಯಾಗುತ್ತಿರುವುದು ನಿತ್ಯ ಘಟನೆಯಾಗಿದೆ. ಅದೇ ರೀತಿ ಮನೆಗಳ ಮುಂಭಾಗದಲ್ಲಿರುವ ಚಪ್ಪಲಿಗಳನ್ನು ಕೂಡಾ ನಾಯಿಗಳು ಕಚ್ಚಿಕೊಂಡು ಹೋಗುತ್ತಿದೆ. ಬಂದ್ಯೋಡ್ ಅಡ್ಕ ರಸ್ತೆ ಬದಿಯಲ್ಲಿ ಮೇಯುತಿದ್ದ ಹಸುವಿನ ಕರುವನ್ನು ನಾಯಿ ಪಡೆಗಳು ಕಚ್ಚಿ ಕೊಂದು ಹಾಕಿದ ಘಟನೆ ಇತ್ತೀಚೆಗೆ ನಡೆದಿತÀÄ್ತ. ಬಂದ್ಯೋಡು ಅಡ್ಕ, ಪ್ರತಾಪನಗರ, ಮಂಜೇಶ್ವರ ಸಹಿತ ವಿವಿಧ ಪ್ರದೇಶಗಳ ಒಳರಸ್ತೆಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮಿತಿ ಮೀರಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
