ಬೀದಿ ನಾಯಿಗಳ ಉಪಟಳ ತೀವ್ರ ಕಡಿತಕ್ಕೊಳಗಾಗುತ್ತಿರುವವರಲ್ಲಿ ಮಕ್ಕಳೇ ಹೆಚ್ಚು
ಕಾಸರಗೋಡು: ಜಿಲ್ಲೆಯ ವಿವಿಧೆಡೆ ಗಳಲ್ಲಿ ಬೀದಿನಾಯಿಗಳ ಉಪಟಳ ಕೆಲವು ದಿನಗಳಿಂದ ತೀವ್ರಗೊಳ್ಳತೊ ಡಗಿದೆ. ಕುಂಡಂಕುಳಿ ಮತ್ತು ಕಳತ್ತೂರು ಪ್ರದೇಶಗಳ ಮೂವರು ವಿದ್ಯಾರ್ಥಿಗಳಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ. ಮನುಷ್ಯರಿಗೆ ಮಾತ್ರವಲ್ಲ ದನ, ಆಡು, ಬೆಕ್ಕು ಇತ್ಯಾದಿಗಳೂ ಬೀದಿ ನಾಯಿ ಗಳಿಂದ ನಿರಂತರ ದಾಳಿಗೊಳ ಗಾಗುತ್ತಿವೆ. ಬೀದಿನಾಯಿಗಳ ಉಪಟಳ ದಿಂದಾಗಿ ತಮ್ಮ ಮಕ್ಕಳನ್ನು ಮನೆ ಯಿಂದ ಹೊರಬಿಡಲು ಸಾಧ್ಯವಾಗದ ಸ್ಥಿತಿ ಇಗ ಇದೆ ಎಂದು ಕುಂಡಂಕುಳಿ ಮತ್ತು ಕಳತ್ತೂರು ಪ್ರದೇಶಗಳ ಜನರು ಹೇಳುತ್ತಿದ್ದಾರೆ. ಬೀದಿನಾಯಿಗಳ ಉಪಟಳ ಕೇವಲ ಈ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಇನ್ನೂ ಹಲವು ಪ್ರದೇಶಗಳಲ್ಲಿ ಬೀದಿನಾಯಿಗಳ ಕಾಟ ದಿನೇ ದಿನೇ ಹೆಚ್ಚಾಗುತ್ತಿದೆ.
ಆಹಾರ ಸಾಮಗ್ರಿಗಳು ಒಳಗೊಂಡ ತ್ಯಾಜ್ಯಗಳನ್ನು ರಸ್ತೆ ಬದಿ, ಇತರ ತೆರೆದ ಪ್ರದೇಶಗಳಲ್ಲಿ ಹಾಗೂ ಹಿತ್ತಿಲುಗಳಲ್ಲಿ ತಂದೆಸೆಯುತ್ತಿರುವ ಪ್ರದೇಶಗಳಲ್ಲೇ ಬೀದಿ ನಾಯಿಗಳ ಕಾಟ ಅತೀ ಹೆಚ್ಚಿದೆ. ಆಹಾರ ಇತ್ಯಾದಿ ತ್ಯಾಜ್ಯಗಳನ್ನು ರಾತ್ರಿಯ ಮರೆಯಲ್ಲಿ ನಿರ್ಜನ ಪ್ರದೇಶ ಹಾಗೂ ರಸ್ತೆ ಬದಿಯಲ್ಲಿ ಇತರ ತೆರೆದ ಪ್ರದೇಶಗಳಲ್ಲಿ ತಂದು ಹಾಕುತ್ತಿರುವ ಚಾಳಿಯನ್ನು ಕೆಲವರು ಇನ್ನೂ ಮುಂದುವರಿಸುತ್ತಲೇ ಇದ್ದಾರೆ. ಆ ಬಗ್ಗೆ ಕೆಲವು ಪ್ರದೇಶಗಳ ಜನರು ಸಂಬಂಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಅದರಿಂದ ಸೂಕ್ತ ಫಲ ಉಂಟಾಗುತ್ತಿಲ್ಲ ವೆಂದೂ ಜನರು ಹೇಳುತ್ತಿದ್ದಾರೆ. ಹೀಗೆ ತಂದೆಸೆಯಲಾಗುವ ಆಹಾರ ತ್ಯಾಜ್ಯಗಳನ್ನು ಬೀದಿ ನಾಯಿಗಳು ತಿಂದು ಬಳಿಕ ಆ ಪರಿಸರದ ಪ್ರದೇಶ ಗಳಲ್ಲೇ ಖಾಯಂ ಆಗಿ ನೆಲೆಯೂ ರುತ್ತವೆ. ಮಾತ್ರವಲ್ಲ ಅಂತಹ ಸ್ಥಳಗಳು ತಮ್ಮ ಸಂತಾನೋತ್ಪತ್ತಿಯನ್ನು ಹೆಚ್ಚಿಸುತ್ತಿದೆ.
ಇದು ಬೀದಿ ನಾಯಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲು ದಾರಿ ಮಾಡಿ ಕೊಡುತ್ತದೆ. ತೆರೆದ ಹಾಗೂ ನಿರ್ಜನ ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ತಂದೆಸೆಯು ವವರ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾನೂನು ಪ್ರಕಾರ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಇಷ್ಟೆಲ್ಲಾ ಆದರೂ ತ್ಯಾಜ್ಯ ತಂದೆಸೆಯುವವರ ಅಟ್ಟಹಾಸ ರಾತ್ರಿ ವೇಳೆಗಳಲ್ಲಿ ಇನ್ನೂ ಮುಂದುವರಿಯುತ್ತಿದೆ.