ಬೃಹತ್ ಪ್ರಮಾಣದ ತಂಬಾಕು ಉತ್ಪನ್ನ ವಶ: ಇಬ್ಬರ ಸೆರೆ

ಕಾಸರಗೋಡು: ವಾಹನದಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರು ಉಳಿಯತ್ತಡ್ಕದ ಸಮೀರ್ ಎ.ವೈ.(40) ಮತ್ತು ಕುಂಬಳೆಗೆ ಸಮೀಪದ ಆರಿಕ್ಕಾಡಿ ಕುನ್ನಿಲ್ ಹೌಸ್‌ನ ಸಿದ್ದೀಕ್ ಬಿ. (38) ಎಂಬವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಎರಡು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಾಗಿ ಕೇರಳದಲ್ಲಿ ನಿಷೇಧ ಹೇರಲಾದ ತಂಬಾಕು ಉತ್ಪನ್ನಗಳನ್ನು ತುಂಬಿಸಿಡಲಾಗಿತ್ತು.

ಚಂದೇರಕ್ಕೆ ಸಮೀಪದ ಮಚ್ಚಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಂದೇರಾ ಪೊಲೀಸ್ ಠಾಣೆಯ ಎಸ್‌ಐ ಸತೀಶ್ ವರ್ಮಾರ ನೇತೃತ್ವದ ಪೊಲೀಸರ ತಂಡ ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಪಿಕಪ್ ವ್ಯಾನನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಈ ಮಾಲು ಪತ್ತೆಯಾಗಿದೆ. ಅದರಂತೆ ಆ ವ್ಯಾನ್ ಸಹಿತ ಇಬ್ಬರನ್ನು  ಪೊಲೀಸರು ವಶಕ್ಕೆ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page