ಬೃಹತ್ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನ, ನಗದು ಪತ್ತೆ: ಕಾರು ಸಹಿತ ಓರ್ವ ಕಸ್ಟಡಿಗೆ
ಬೃಹತ್ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನ, ನಗದು ಪತ್ತೆ: ಕಾರು ಸಹಿತ ಓರ್ವ ಕಸ್ಟಡಿಗೆ
ಕಾಸರಗೋಡು: ಕಾಸರಗೋಡು ಮತ್ತು ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಪ್ರತ್ಯೇಕ ಕಾರ್ಯಾಚರಣೆ ಗಳಲ್ಲಾಗಿ ಕೇರಳದಲ್ಲಿ ನಿಷೇಧ ಹೇರಲಾಗಿರುವ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನ ಮತ್ತು ನಗದು ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬAಧಿಸಿ ಓರ್ವನನ್ನು ಕಾರು ಸಹಿತ ವಶಕ್ಕೆ ತೆಗೆದು ಕೇಸು ದಾಖಲಿಸಲಾಗಿದೆ.
ಉಳಿಯತ್ತಡ್ಕ ಸಮೀಪದ ಚೆಟ್ಟುಂಗುಳಿ ಹಿದಾಯತ್ ನಗರದ ಜನವಾಸವಿಲ್ಲದ ಮನೆಯೊಂದಕ್ಕೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ. ಅಜಿತ್ರ ನೇತೃತ್ವದಲ್ಲಿ ಡಾನ್ಸಾಫ್ ಟೀಮ್ ತಂಡದ ಪೊಲೀಸರು ನಿನ್ನೆ ನಡೆಸಿದ ದಾಳಿಯಲ್ಲಿ 36,509 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಈ ಮಾಲುಗಳನ್ನು ಮನೆಯ ಹಾಲ್ನೊಳಗೆ ಹಲವು ಗೋಣಿಚೀಲಗಳಲ್ಲಾಗಿ ಬಚ್ಚಿಡಲಾಗಿತ್ತು. ಈ ಕಾರ್ಯಾಚರಣೆ ನಡೆಸಿದ ಪೊಲೀ ಸರ ತಂಡದಲ್ಲಿ ಸಿವಿಲ್ ಪೊಲೀಸ್ ಆಫೀಸರ್ ಕೆ. ಶ್ರುತಿ ಮತ್ತು ಚಾಲಕ ನಾರಾಯಣನ್ ಎಂಬವರು ಒಳಗೊಂ ಡಿದ್ದರು. ಇದರ ಹೊರತಾಗಿ ವಿದ್ಯಾನಗರ ಪೊಲೀಸ್ ಠಾಣೆ ಎಸ್.ಐ. ಅಬ್ಬಾಸ್ ಪಿ.ಕೆ.ರ ನೇತೃತ್ವದಲ್ಲಿ ಪೊಲೀಸರು ನಿನ್ನೆ ಉದಯಗಿರಿ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ 43,358 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳು ಹಾಗೂ 89,420 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಕಾರಿನಿಂದ ಈ ಮಾಲು ಪತ್ತೆಹಚ್ಚ ಲಾಗಿದೆ. ಇದಕ್ಕೆ ಸಂಬAಧಿಸಿ ಕಾರು ಸಹಿತ ಉಳಿಯತ್ತಡ್ಕ ಪಳ್ಳಂ ಹೌಸ್ನ ಮೊಹಮ್ಮದ್ ಅಶ್ರಫ್ (32) ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಲಾಗಿದೆ. ಆರೋಪಿಗೆ ನಂತರ ನೋಟೀಸು ನೀಡಿ ಬಿಡುಗಡೆಗೊಳಿಸಲಾಯಿತು.
ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಹಲವೆಡೆಗಳಿಗೆ ಮಾರಾಟಕ್ಕಾಗಿ ಈ ಮಾಲನ್ನು ಉಪಯೋಗಿಸಲಾ ಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕುಂಬಳೆ ಪೊಲೀಸರು ಮೊಗ್ರಾಲ್ ಸೇತುವೆ ಬಳಿ ಮೊನ್ನೆ ರಾತ್ರಿ 1,14,878 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ನಿನ್ನೆ ಕಾಸರಗೋಡು ಮತ್ತು ವಿದ್ಯಾನಗರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.