ಬೆಡ್‌ರೂಂ ದೃಶ್ಯಗಳನ್ನು ಚಿತ್ರೀಕರಿಸಿ ಬ್ಲಾಕ್‌ಮೈಲ್: 58 ಲಕ್ಷ ರೂ. ಲಪಟಾವಣೆ: ಕಾಸರಗೋಡು ನಿವಾಸಿ ಸೆರೆ
ಕಾಸರಗೋಡು: ಸ್ನೇಹಿತನಾದ ಯುವಕನ ಬೆಡ್‌ರೂಂ ದೃಶ್ಯಗಳನ್ನು ಗುಪ್ತ ಕ್ಯಾಮರಾ ಮೂಲಕ ಚಿತ್ರೀಕರಿಸಿ ಬಳಿಕ ಅದನ್ನು ತೋರಿಸಿ ಬ್ಲಾಕ್‌ಮೈಲ್ ಗೊಳಿಸಿ ಯುವಕನನ್ನು ಅಪಹರಿಸಿ 58 ಲಕ್ಷ ರೂಪಾಯಿ ಎಗರಿಸಿದ ಪ್ರಕರ ಣದಲ್ಲಿ ಆರೋಪಿಯಾದ ಕಾಸರ ಗೋಡು ನಿವಾಸಿಯನ್ನು ಕೊಚ್ಚಿ ಕಡವತ್ರ ಪೊಲೀಸರು ಬಂಧಿಸಿದ್ದಾರೆ. ಚಟ್ಟಂಚ್ಚಾಲ್ ಬಂದಾಡ್ ಹೌಸ್‌ನ ಅಬ್ದುಲ್ ರಹ್ಮಾನ್ (43) ಬಂಧಿತ ಆರೋಪಿ. ಈತನ ವಿರುದ್ಧ ಸ್ನೇಹಿತನಾಗಿರುವ ಕಾಸರಗೋಡು ನಿವಾಸಿ ಯುವಕ ಪೊಲೀಸರಿಗೆ ದೂರು ನೀಡಿದ್ದನು. ಅದರಂತೆ ಅಬ್ದುಲ್ ರಹ್ಮಾನ್ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಕಡವತ್ರ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರು ನೀಡಿದ ೩೦ರ ಹರೆಯದ ಯುವಕ ಕೊಚ್ಚಿಯ ಕಲ್ಲುರ- ಕತ್ತುಕಡವು ರಸ್ತೆ ಬಳಿ ಹೋಟೆಲ್ ನಡೆಸುತ್ತಿದ್ದಾನೆ. 2020 ಮಾರ್ಚ್ ತಿಂಗಳಲ್ಲಿ ಆರೋಪಿ ತಾನು ವಾಸಿಸುವ ಮನೆಯ ಬೆಡ್‌ರೂಂನಲ್ಲಿ ತನಗೆ ತಿಳಿ ಯದೆ ಕ್ಯಾಮರಾ ಇರಿಸಿ, ತಾನು ಹಾಗೂ ತನ್ನ ಸ್ನೇಹಿತೆಯರ ಚಿತ್ರಗಳನ್ನು ಚಿತ್ರೀಕರಿಸಿದ್ದನು. ನಂತರ ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುವುದಾಗಿ ಬೆದರಿಕೆಯೊಡ್ಡಿ ಆರೋಪಿ ಹಲವು ಬಾರಿ ನೇರವಾಗಿ 52 ಲಕ್ಷ ರೂಪಾಯಿ ಹಾಗೂ ಬ್ಯಾಂಕ್ ಮೂಲಕ 6 ಲಕ್ಷ ರೂಪಾಯಿಗಳನ್ನು ಎಗರಿಸಿದ್ದಾನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ಆರೋಪಿಸಿದ್ದಾನೆ. ಅನಂತರವೂ ಹಣ ನೀಡುವಂತೆ ಬೆದರಿ ಕೆಯೊಡ್ಡಿದ್ದಾನೆ. ಆದರೆ ಅದಕ್ಕೆತಾನು ಸಿದ್ಧವಾಗದಿದ್ದಾಗ ಕಳೆದ ಮಂಗಳವಾರ ಆರೋಪಿ ಆತನ ಸ್ನೇಹಿತರೂ ಕಾಸರ ಗೋಡು ನಿವಾಸಿಗಳಾದ ಇರ್ಫಾನ್, ಅಮ್ಮಿ, ಆಶಿಫ್, ಮಟ್ಟಂಚೇರಿ ನಿವಾಸಿ ಗಳಾದ ಇತರ ಇಬ್ಬರು ಸೇರಿ ಕಲ್ಲೂರು-ಕತ್ತುಕಡವು ರಸ್ತೆ ಬಳಿ ತನ್ನ ಹೋಟೆಲ್‌ಗೆ ಬಂದು ತನ್ನನ್ನು ಬಲವಂತವಾಗಿ ಕಾರಿಗೆ ಹತ್ತಿಸಿ ಅಪಹರಿಸಿ ಇಡಕೊಚ್ಚಿಯ ಪ್ಲಾಟ್‌ನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದರೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ಆರೋಪಿ ಸಿದ್ದಾನೆ. ಆ ದೂರಿನಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿ ಸಿಕೊಂಡ ಪೊಲೀಸರು ಪ್ರಕರಣದ ಪ್ರಧಾನ ಸೂತ್ರಧಾರನಾದ ಅಬ್ದುಲ್ ರಹ್ಮಾನ್‌ನನ್ನು ಬಂಧಿಸಿದ್ದಾರೆ. ಕಡವತ್ರ ಪೊಲೀಸ್ ಠಾಣೆಯ ಎಸ್‌ಐ ಪಿ.ಎಂ. ರತೀಶ್ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇತರ ಐದು ಮಂದಿಯ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.