ಬೆಳೇರಿಯಲ್ಲಿ ಬಸ್ ತಂಗುದಾಣ ಲೋಕಾರ್ಪಣೆ

ಬೆಳ್ಳೂರು: ಬದಿಯಡ್ಕ-ಸುಳ್ಯಪದವು ರಸ್ತೆಯ ದೊಂಪತ್ತಡ್ಕ ಬೆಳೇರಿಯಲ್ಲಿ ಶಿವಾಜಿ ಫ್ರೆಂಡ್ಸ್ ಸರ್ಕಲ್ ಬಸ್ ತಂಗುದಾಣವನ್ನು ನಿರ್ಮಿಸಿದೆ. ಇದೇ ಸ್ಥಳದಲ್ಲಿ ಉದ್ಯಮಿ ಶ್ರವಣ್ ರೈ ಪಿಂಡಗ ಕೊಡುಗೆಯಾಗಿ ನೀಡಿದ ಸೋಲಾರ್ ಲ್ಯಾಂಪ್‌ನ್ನು ಸ್ಥಾಪಿಸಲಾಯಿತು. ಬಸ್ ತಂಗುದಾ ಣವನ್ನು, ದೀಪವನ್ನು ನಿನ್ನೆ ಸಂಜೆ ಲೋಕಾರ್ಪಣೆಗೊಳಿಸಲಾಯಿತು. ಕಿಶೋರ್ ಬೈಲಮೂಲೆ, ಬಾಲಚಂದ್ರ ಬೈಲಮೂಲೆ, ಪ್ರವೀಣ್ ಬೆಳೇರಿ ಮಾತನಾಡಿದರು. ಊರಿನ ಸಹೃದ ಯರ  ಸಹಕಾರದೊಂದಿಗೆ ಫ್ರೆಂಡ್ಸ್ ಸರ್ಕಲ್ ತಂಗುದಾಣವನ್ನು ನಿರ್ಮಿಸಿದೆ.

You cannot copy contents of this page