ಬೇಳದಲ್ಲಿ ಬೀಗ ಜಡಿದ ಮನೆಯಿಂದ ನಗ-ನಗದು ಕಳವು

ನೀರ್ಚಾಲು: ಇಲ್ಲಿನ ಬೇಳದಲ್ಲಿ ಬೀಗ ಜಡಿದ ಮನೆಗೆ ನುಗ್ಗಿದ ಕಳ್ಳರು 5 ಪವನ್ ಚಿನ್ನಾಭಾರಣ ಹಾಗೂ 80 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ. ಬೇಳದ ಜಯಪ್ರಸಾದ್ ಆಳ್ವ ಎಂಬವರ ಮನೆಯಿಂದ ಈ ಕಳವು ನಡೆದಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೊಠಡಿಯಲ್ಲಿದ್ದ ಐದು ಕಪಾಟುಗಳನ್ನು ಮುರಿದು  ನಗ-ನಗದು ದೋಚಿದ್ದಾರೆ.  ಜಯಪ್ರಸಾದ್ ಆಳ್ವ ಹಾಗೂ ಪತ್ನಿ ಮನೆಗೆ ಬೀಗ ಜಡಿದು ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಮಕ್ಕಳ ಮನೆಗೆ  ತೆರಳಿದ್ದರು. ಇಂದು ಮುಂಜಾನೆ ಮರಳಿ ಬಂದಾಗಲೇ ಮನೆಗೆ ಕಳ್ಳರು ನುಗ್ಗಿದ ವಿಷಯ ತಿಳಿದುಬಂದಿದೆ. ಈ ಬಗ್ಗೆ ಜಯಪ್ರಸಾದ್  ಆಳ್ವ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page