ಬೈಕ್‌ಗೆ ಲಾರಿ ಢಿಕ್ಕಿ: ಯುವಕನ ದಾರುಣ ಸಾವಿನಿಂದ ನಾಡಿನಲ್ಲಿ ಶೋಕಸಾಗರ
ಕುಂಬಳೆ: ವಾಹನ ಅಪಘಾತ ದಲ್ಲಿ ಪೇರಾಲ್ ಕಣ್ಣೂರು ನಿವಾಸಿ ಯಾದ ಯುವಕ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ಪೇರಾಲ್ ಕಣ್ಣೂರು ನಿವಾಸಿ ತ್ಯಾಂಪಣ್ಣ ಪೂಜಾರಿಯವರ ಪುತ್ರ ರವಿಚಂದ್ರ (35) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಇವರು ಮೆಡಿಕಲ್ ರೆಪ್ರಸೆಂಟೇ ಟಿವ್ ಆಗಿದ್ದರು. ನಿನ್ನೆ ಮಧ್ಯಾಹ್ನ 1.15ರ ವೇಳೆ ಶಿರಿಯ ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಮುಂಭಾಗ ಅಪಘಾತ ಸಂಭವಿಸಿತ್ತು. ರವಿಚಂದ್ರ ಸಂಚರಿಸುತ್ತಿದ್ದ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಅಪಘಾತವುಂಟಾಗಿದ್ದು, ಇದರಿಂದ ಗಂಭೀರ ಗಾಯಗೊಂಡ ರವಿಚಂದ್ರ ಘಟನೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಸ್ವಗೃಹಕ್ಕೆ ಕೊಂಡೊಯ್ದು ನಿನ್ನೆ ರಾತ್ರಿ 12 ಗಂಟೆ ವೇಳೆ ಮನೆ ಹಿತ್ತಿಲಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ತಾಯಿ ಸುಂದರಿ, ಪತ್ನಿ ಸಂಧ್ಯಾ, ಪುತ್ರಿ ಆರಾಧ್ಯ, ಸಹೋದರ-ಸಹೋದರಿಯರಾದ ಜನಾರ್ದನ ಪೂಜಾರಿ (ಪುತ್ತಿಗೆ ಪಂಚಾಯತ್ 9ನೇ ವಾರ್ಡ್ ಸದಸ್ಯ), ಮೋಹನ, ಯೋಗೀಶ್, ಶಿವರಾಮ, ಜಯಕರ,ರೇವತಿ, ಸತ್ಯ, ಮೋಹಿನಿ, ವಾರಿಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.