ಬೈಕ್‌ನಲ್ಲಿ ಬಂದು ಆಯುರ್ವೇದ ಅಂಗಡಿ ಮಾಲಕಿಯ ಚಿನ್ನದ ಸರ ಎಗರಿಸಿದ ಆರೋಪಿ ಸೆರೆ
ಕಾಸರಗೋಡು: ಕಳೆದ ಮಾರ್ಚ್ ೨೬ರಂದು ಬೇಡಡ್ಕ ಪಡ್ಪು ಪೇಟೆಯಲ್ಲಿರುವ ಆಯುರ್ವೇದ ಅಂಗಡಿ ಮಾಲಕಿ ತಂಗಮ್ಮ ಎಂಬವರ ಕುತ್ತಿಗೆಯಿಂದ ಮೂರು ಪವನ್‌ನ ಚಿನ್ನದಸರ ಎಗರಿಸಿ ಪರಾರಿಯಾದ ಪ್ರಕರಣದ ಆರೋಪಿಯನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ.
ಉದುಮ ಬಾರ ಮೀತಲ್ ಮಾಂಙಾಡ್‌ನ ಅಬ್ದುಲ್ ಮಾಲಿಕ್ (೨೬) ಬಂಧಿತ ಆರೋಪಿ. ಈತ ಬೈಕ್‌ನಲ್ಲಿ ಆಯುರ್ವೇದ ಅಂಗಡಿಗೆ ಬಂದು ಅಂಗಡಿ ಮಾಲಕಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಬಳಿಕ ಅದೇ ಬೈಕ್‌ನಲ್ಲಿ ಪರಾರಿಯಾ ಗಿದ್ದನು. ಆ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ಬೇಕಲ ಕೋಟಿಕುಳಂ ಪಡಿಞ್ಞಾರ್ ಫಾತಿಮಾ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿ ರುವ ಎಂ.ಕೆ. ಮೊಹಮ್ಮದ್ ಇಜಾಸ್ (೨೪) ಎಂಬಾತನೂ ಈ ಪ್ರಕರ ಣದ ಇನ್ನೋರ್ವ ಆರೋಪಿಯಾ ಗಿದ್ದಾನೆ. ಇದೇ ರೀತಿಯ ಬೇರೊಂದು ಚಿನ್ನದ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಪೊಲೀಸರು ಇಜಾಸ್ ಮತ್ತು ಉದುಮ ಪಾಕಂ ಚೇರ್ಕಪ್ಪಾರ ಹಸ್ನ ಮಂಜಿಲ್‌ನ ಇಬ್ರಾಹಿಂ ಬಾದುಷಾ (೨೪) ಎಂಬಾತನನ್ನು ಸೆ. ೨೦ರಂದು ಬಂಧಿಸಿದ್ದರು. ಅವರಿಬ್ಬರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪಡ್ಪಿನ ಆಯುರ್ವೇದ ಅಂಗಡಿ ಮಾಲಕಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣಕ್ಕೆ ಸಂಬಂ ಧಿಸಿದ ಹೆಚ್ಚಿನ ತನಿಖೆಗಾಗಿ ಈಗ ನ್ಯಾಯಾಂಗ ಬಂಧನದಲ್ಲಿರುವ ಮೊಹ ಮ್ಮದ್ ಇಜಾಸ್‌ನನ್ನು ನ್ಯಾಯಾ ಲಯದ ಅನುಮತಿಯೊಂದಿಗೆ ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲಾಗುವು ದೆಂದೂ ಅದಕ್ಕಾಗಿ ನ್ಯಾಯಾ ಲಯಕ್ಕೆ ಅರ್ಜಿ ಸಲ್ಲಿಸಲಾಗು ವುದೆಂದೂ ಪೊಲೀಸರು ತಿಳಿಸಿದ್ದಾರೆ.
ಇಜಾಸ್‌ನ ವಿರುದ್ಧ ಕಾಸರ ಗೋಡು ಜಿಲ್ಲೆಯಲ್ಲಿ ಮಾತ್ರವಲ್ಲ ಕಣ್ಣೂರು, ಕಲ್ಲಿಕೋಟೆ, ಎರ್ನಾ ಕುಳಂ ಜಿಲ್ಲೆಗಳು ಮತ್ತು ಮಂಗಳೂರು ಎಂಬಿಡೆಗಳಲ್ಲಾಗಿ ೧೨ ಪ್ರಕರ ಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಈತ ತನ್ನ ೧೭ನೇ ವಯಸ್ಸಿನಲ್ಲೇ ಈ ದಂಧೆಗಿಳಿದಿದ್ದ ನೆಂದು ಅವರು ತಿಳಿಸಿದ್ದಾರೆ.