ಬೈಕ್ನಲ್ಲಿ ಸಂಚರಿಸುತ್ತಿದ್ದ ತಾಯಿಯ ಕೈಯಿಂದ ಮಗು ರಸ್ತೆಗೆ ಬಿದ್ದು ಮೃತ್ಯು
ಆಲಪ್ಪುಳ: ಬೈಕ್ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವತಿಯ ಕೈಯಿಂದ ಎಂಟು ತಿಂಗಳ ಮಗು ರಸ್ತೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಆಲಪ್ಪುಳ ಬಳಿಯ ಪೂವತ್ತಿಲ್ ಎಂಬಲ್ಲಿನ ಅಸ್ಲಾಂ ಎಂಬವರ ಪುತ್ರ ಮುಹ ಮ್ಮದ್ ಮೃತಪಟ್ಟ ಮಗುವಾಗಿದೆ. ನಿನ್ನೆ ಸಂಜೆ ಮಣ್ಣಂಜೇರಿ ಜಂಕ್ಷನ್ನಲ್ಲಿ ಅಪಘಾತವುಂ ಟಾಗಿದೆ. ರಸ್ತೆಗೆ ಅಡ್ಡವಾಗಿ ಸಂಚರಿಸಿದ ಬೇರೊಂದು ಸ್ಕೂಟರ್ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಬೈಕ್ನ ಹಿಂಬದಿ ಯಲ್ಲಿದ್ದ ಯುವತಿಯ ಕೈಯಿಂದ ಮಗು ರಸ್ತೆಗೆ ಬಿದ್ದಿದೆ ಎನ್ನಲಾಗುತ್ತಿದೆ. ಅಸ್ಲಾಂರ ತಂದೆ ಶಾಜಿಯೊಂದಿಗೆ ಅಸ್ಲಾಂ ಪತ್ನಿ ತಸಿಯಾ ಹಾಗೂ ಮಗು ಸಂಚರಿಸುತ್ತಿದ್ದರು. ಸ್ಕೂಟರ್ ಅಡ್ಡ ಬಂದಾಗ ಬೈಕನ್ನು ದಿಢೀರ್ ನಿಲ್ಲಿಸಿದಾಗ ಮಗುಚಿ ಬಿದ್ದಿದೆ. ಈ ವೇಳೆ ಮಗು ರಸ್ತೆಗೆಸೆಯಲ್ಪಟ್ಟಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.