ಬೈಕ್‌ನಲ್ಲಿ ಸಾಗಿಸುತ್ತಿದ್ದ ಪ್ಯಾಕೆಟ್ ಮದ್ಯ ಸಹಿತ ಮಣಿಯಂಪಾರೆ ನಿವಾಸಿ ಸೆರೆ

ಪೆರ್ಲ: ಬೈಕ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ನಿರ್ಮಿತ ಪ್ಯಾಕೆಟ್ ಮದ್ಯ ಸಹಿತ ಯುವಕನನ್ನು ಬಂಧಿಸಲಾಗಿದೆ. ಎಣ್ಮಕಜೆ ಮಣಿಯಂಪಾರೆ ಅರಮಂಗಾಲ್ ನಿವಾಸಿ ಎಸ್. ಜಗದೀಶ್ (42ನನ್ನು ಬದಿಯಡ್ಕ ಅಬಕಾರಿ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಎಂ. ಕೃಷ್ಣ ಹಾಗೂ ತಂಡ ಸೆರೆ ಹಿಡಿದಿದೆ. ಪೆರ್ಲ ಸಮೀಪದ ಇಡಿಯಡ್ಕದಲ್ಲಿ ಅಬಕಾರಿ ತಂಡ ನಡೆಸಿದ ತಪಾಸಣೆಯಲ್ಲಿ ಜಗದೀಶ್ ಸೆರೆಯಾಗಿದ್ದಾನೆ. ಈತನಿಂದ 180 ಮಿಲ್ಲಿಯ ೪೦ ಟೆಟ್ರಾ ಪ್ಯಾಕ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಅಬಕಾರಿ ತಂಡದಲ್ಲಿ ಐಬಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಎಸ್. ಜೇಕಬ್, ಸಿಇಒಗಳಾದ ಕೆ. ವಿನೋದ್, ಪಿ. ಸದಾನಂದನ್, ಚಾಲಕ ಸತ್ಯನ್ ಸಹಕರಿಸಿದ್ದರು.

You cannot copy contents of this page