ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕ ಸಾವು

ಕಾಸರಗೋಡು: ಬೈಕ್ ಅಫಘಾತ ದಲ್ಲಿ ಗಂಭೀರ ಗಾಯಗೊಂಡು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ಯುವಕ ಸಾವನ್ನ ಪ್ಪಿದ್ದಾರೆ. ಚೆರ್ವತ್ತೂರು ರೈಲು ನಿಲ್ದಾಣ ಬಳಿ ವಾಸಿಸುತ್ತಿರುವ ಮೂಲತಃ ಕನ್ಯಾಕುಮಾರಿ ನಿವಾಸಿ ನೌಶಾದ್ (೩೪) ಸಾವನ್ನಪ್ಪಿದ ಯುವಕ. ನೌಶಾದ್ ಮೊನ್ನೆ ರಾತ್ರಿ  ಬೈಕ್‌ನಲ್ಲಿ ಕೈದಕ್ಕಾಡ್ ಕುಳಇತ್ತಡಿಯ ಮೂಲಕ ಚೆರ್ವತ್ತೂರಿಗೆ ಹೋಗುವ ದಾರಿ ಮಧ್ಯೆ ಸೈಕಲ್‌ನಲ್ಲಿ ಆ ದಾರಿಯಾಗಿ ಬರು ತ್ತಿದ್ದ ಬಾಲಕನಿಗೆ ಢಿಕ್ಕಿ ಹೊಡೆಯದಿರಲು ಬೈಕ್‌ನ್ನು ತಿರುಗಿಸಿದಾಗ ಅದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಆ ಅಪಘಾತದಲ್ಲಿ ನೌಶಾದ್‌ರ ತಲೆಗೆ ಗಂಭೀರ ಏಟು ಬಿದ್ದಿದೆ. ತಕ್ಷಣ ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿ ತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

You cannot copy contents of this page