ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು
ನೀರ್ಚಾಲು: ಬೈಕ್ ಅಪಘಾತ ದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟರು. ಮೂಲತಃ ಆಲಪ್ಪುಳ ಕಣಿಚ್ಚುಕುಳಂಗರ ನಿವಾಸಿಯೂ, ಪ್ರಸ್ತುತ ಕನ್ಯಪ್ಪಾ ಡಿಯಲ್ಲಿ ವಾಸಿಸುತ್ತಿದ್ದ ಎಬಿ (49) ಮೃತಪಟ್ಟ ವ್ಯಕ್ತಿ. ಇವರು ಈ ಹಿಂದೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ವರ್ಷಗಳ ಹಿಂದೆ ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಎಬಿ ಗಂಭೀರ ಗಾಯಗೊಂಡು ಚಿಕಿತ್ಸೆ ಯಲ್ಲಿದ್ದರು. ಕಮಲಾಕ್ಷ-ಕನಕಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಬಿಂದು (ಬದಿಯಡ್ಕ ಸಿಎಚ್‌ಸಿ ನರ್ಸ್) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.