ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದು ಗಾಯಗೊಂಡ ಯುವಕ ಮೃತ್ಯು
ಉಪ್ಪಳ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ವರ್ಕಾಡಿ ಬಳಿಯ ನಲ್ಲೆಂಗಿ ಎಂಬಲ್ಲಿನ ದಿ| ಹೆನ್ರಿ ಮೋರಸ್ ಎಂಬವರ ಪುತ್ರ ರೋಶನ್ ಮೋರಸ್ (34) ಮೃತಪಟ್ಟ ದುರ್ದೈವಿಯಾಗಿ ದ್ದಾರೆ. ಇವರು ಇಲೆಕ್ಟ್ರೀಶ್ಯನ್ ಕೆಲಸ ನಿರ್ವಹಿಸುತ್ತಿದ್ದರು. ಮೊನ್ನೆ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಮುಡಿಪು ಬಳಿ ಬೋಳಿಯಾರ್‌ನಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದು ಅಪಘಾತವುಂ ಟಾಗಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯರು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ತಲುಪಿಸಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಮಧ್ಯೆ ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮೃತದೇಹದ ಅಂತ್ಯಸಂಸ್ಕಾರ ಇಂದು ವರ್ಕಾಡಿ ಚರ್ಚ್ ಬಳಿ ನಡೆಯಲಿದೆ ಯೆಂದು ಸಂಬಂಧಿಕರು ತಿಳಿಸಿದ್ದಾರೆ.
ಮೃತರು ತಾಯಿ ಲಿಲ್ಲಿ ಡಿ’ಸೋ ಜಾ, ಪತ್ನಿ ಪ್ರಮೀಳ ಲೂಯಿಸ್, ಪುತ್ರಿ ರೀವಲ್ ಪರ್ಲ್ ಮೋರಸ್ ಹಾಗೂ ಇಬ್ಬರು ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.