ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಹಲ್ಲೆ:  ಮೂಗಿಗೆ  ಗಂಭೀರಗಾಯ

ಮುಳ್ಳೇರಿಯ: ಬೈಕ್ ತಡೆದು ನಿಲ್ಲಿಸಿ  ಯುವಕನ  ಮೂಗಿಗೆ ಗಂಭೀರ ಗಾಯಗೊಳಿಸಿರುವುದಾಗಿ ದೂರಲಾಗಿದೆ. ಅಡೂರು ಪಳ್ಳಂಗೋಡಿನ ಶಮೀರ್ (೨೫)ಗೆ ಹಲ್ಲೆಗೈಯ್ಯಲಾಗಿದೆ. ಇವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಸ್ನೇಹಿತನನ್ನು ದೇವರಡ್ಕದ ಮನೆಯಲ್ಲಿ ಬಿಟ್ಟು ಮರಳಿ ಬರುತ್ತಿದ್ದಾಗ ಮೂರು ಮಂದಿ ರಸ್ತೆಗೆ ಅಡ್ಡವಾಗಿ ಬೈಕ್ ಗಳನ್ನು ನಿಲ್ಲಿಸಿ ತಡೆಯೊಡ್ಡಿ ಹಲ್ಲೆಗೈದಿದ್ದಾರೆಂದು ದೂರಲಾಗಿದೆ. ತಂಡ ಬೆಂಕಿ ಪೆಟ್ಟಿಗೆ ಕೇಳಿದೆಯೆಂದೂ ಆಗ ಅಲ್ಲವೆಂದು ತಿಳಿಸಿದಾಗ ಅಸಬ್ಯವಾಗಿ ನಿಂದಿಸಿ ದ್ವೇಷ ಮೂಡಿಸುವ ರೀತಿಯಲ್ಲಿ ಮಾತನಾಡಿ  ಹಲ್ಲೆಗೈದಿರುವುದಾಗಿ ಶಮೀರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿ ಮೂರು ಮಂದಿ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page