ಬ್ಯಾಂಕಾಕ್‌ನಿಂದ ತರಲಾದ 23.5 ಕಿಲೋ ಹೈಬ್ರಿಡ್ ಗಾಂಜಾ ಪತ್ತೆ : ಯುವತಿ ಸೆರೆ
ಕಾಸರಗೋಡು: ಕಸ್ಟಮ್ಸ್ ತಂಡ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ಬ್ಯಾಂಕಾಕ್ ನಿಂದ ವಿಮಾನದ ಮೂಲಕ ತರಲಾದ 23.5 ಕಿಲೋ ಹೈಬ್ರಿಡ್ ಗಾಂಜಾ ವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂ ಧಿಸಿ ಪಯ್ಯನ್ನೂರು ತಾಯ ನ್ನೂರು ನಿವಾಸಿ ಮಸೂದಾ ಸುಹೈಬ್ (30) ಎಂಬಾಕೆಯನ್ನು ಬಂಧಿಸಲಾಗಿದೆ. 16 ಪ್ಯಾಕೆಟ್‌ಗಳ ಲ್ಲಾಗಿ ಬ್ಯಾಗೇಜ್‌ನಲ್ಲಿ ಈ ಮಾಲು ಬಚ್ಚಿಡಲಾಗಿತ್ತು. ಬಂಧಿತಳಾದ ಯುವತಿ ಈ ಮಾಲನ್ನು ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಅಬುದಾಬಿಯ ಮೂಲಕ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾಳೆ. ಆಕೆಯನ್ನು ನಂತರ ಮೆಜಿಸ್ಟ್ರೇಟರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ವಶಪಡಿಸಲಾದ ಈ ಮಾಲಿಗೆ ಕೋಟಿಗಟ್ಟಲೆ ಬೆಲೆಯಿದೆಯೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.