ಬ್ಯಾಂಕ್‌ನ ಮಾಜಿ ಅಪ್ರೈಸರ್ ನಿಧನ

ಬದಿಯಡ್ಕ: ಪಡ್ರೆ ಸೂರಂಬೈಲು ಕಟ್ಟೆ ನಿವಾಸಿ ಎಸ್.ಕೆ. ಸದಾನಂದ ಆಚಾರ್ಯ (58) ನಿಧನಹೊಂದಿ ದರು. ಇವರು ಕೇರಳ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ ಬದಿಯಡ್ಕ ಘಟಕದ ಮಾಜಿ ಅಪ್ರೈಸರ್ ಆಗಿದ್ದರು. ಅಲ್ಪಕಾಲದಿಂದ ಅಸೌಖ್ಯ ಬಾಧಿಸಿದ್ದ ಇವರು ಮನೆಯಲ್ಲಿ ವಿಶ್ರಾಂತಿಯಲ್ಲಿ ದ್ದರು. ಇಂದು ಮುಂಜಾನೆ ವೇಳೆ ಸ್ವಗೃಹದಲ್ಲಿ ನಿಧನ ಸಂಭವಿಸಿದೆ.

ದಿ| ಸುಬ್ರಾಯ ಆಚಾರ್ಯರ ಪುತ್ರನಾದ ಮೃತರು ತಾಯಿ ಸಾವಿತ್ರಿ, ಪತ್ನಿ ಉಷಾ, ಮಕ್ಕಳಾದ ಪೂರ್ಣಿಮ, ಲಕ್ಷ್ಮೀಸಾವಿತ್ರಿ, ಭವ್ಯ, ಅಳಿಯ ಮನೋಜ್, ಸಹೋದರ ಭಾಸ್ಕರ ಆಚಾರ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page