ಬ್ಯಾಂಕ್‌ಮೆನೇಜರ್ ಸಾವು: ಆತ್ಮಹತ್ಯೆ ಕುರಿತು ಪತ್ರ ಪತ್ತೆ

ಬದಿಯಡ್ಕ: ಎಡನಾಡು ಸೇವಾ ಸಹಕಾರಿ ಬ್ಯಾಂಕ್‌ನ ಕಳತ್ತೂರು ಶಾಖೆ ಮೆನೇಜರ್ ನಾರಂಪಾಡಿ ನೆಲ್ಲಿಯಡ್ಕ ಪಳ್ಳದ ಪಿ. ರಾಮಚಂದ್ರ (೪೬) ಬಚ್ಚಲು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಳೆದ ಶುಕ್ರವಾರ ಸಂಜೆ ರಾಮಚಂದ್ರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ    ಪತ್ತೆಯಾಗಿ ದ್ದರು.  ಬದಿಯಡ್ಕ ಎಸ್.ಐ. ಪಿ.ಕೆ. ವಿನೋದ್ ಕುಮಾರ್‌ರ ನೇತೃತ್ವದಲ್ಲಿ   ನಡೆದ ತನಿಖೆಯಲ್ಲಿ ರಾಮಚಂದ್ರ ಕನ್ನಡದಲ್ಲಿ ಬರೆದಿಟ್ಟಿರುವುದಾಗಿ ಸಂಶಯಿಸುವ ಪತ್ರವೊಂದು ಮನೆಯೊಳಗೆ ಪತ್ತೆಯಾಗಿದೆ. ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಪತ್ರದಲ್ಲಿ ಬರೆಯಲಾಗಿದೆ. ಈ ವಿಷಯಗಳಿಗೆ ಸಂಬಂಧಿಸಿ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಲು ಹಾಜರಾಗುವಂತೆ  ರಾಮಚಂದ್ರರಿಗೆ ಪೊಲೀಸರು ನಿರ್ದೇಶಿಸಿದ್ದರು. ಅದರ ಬೆನ್ನಲ್ಲೇ ರಾಮಚಂದ್ರ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ರಾಮಚಂದ್ರ ನಾಡಿನಲ್ಲಿ ಎಲ್ಲರಿಗೂ ಚಿರಪರಿಚಿತನಾಗಿದ್ದರು. ಎಲ್ಲರೊಂದಿಗೂ ಸ್ನೇಹದಿಂದಿದ್ದ ಅವರ  ಸಾವಿನಿಂದ ನಾಡಿನಲ್ಲಿ  ಶೋಕಸಾಗರ ಸೃಷ್ಟಿಯಾಗಿದೆ.

ಆತ್ಮಹತ್ಯೆ ಕುರಿತು ಸಮಗ್ರವಾಗಿ ತನಿಖೆ ನಡೆಸಿದ ಬಳಿಕ ಆತ್ಮಹತ್ಯೆಗೆ ಪ್ರೇರಣೆ ಕೇಸು ದಾಖಲಿಸುವ ವಿಷಯ ಪರಿಗಣಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page