ಬ್ಯಾಂಕ್ ಸಾಲ ಕಂದಾಯ ಇಲಾಖೆಯ ಜಪ್ತಿ ಕ್ರಮಕ್ಕೆ ತಡೆ
ತಿರುವನಂತಪುರ: ಬ್ಯಾಂಕ್ ಗಳಿಂದ ಸಾಲ ಪಡೆದು ಅದನ್ನು ಮರು ಪಾವತಿಸಲು ಬಾಕಿಯಿರುವವರ ಭೂಮಿ ಹಾಗೂ ಮನೆಯನ್ನು ಜಪ್ತಿ ನಡೆಸುವ ರೆವೆನ್ಯೂ ರಿಕವರಿ ಕ್ರಮಗಳನ್ನು ನಿಲ್ಲಿಸುವಂತೆ ಸರಕಾರ ಆದೇಶವಿತ್ತಿದೆ. ಸಾಲ ತೀರಿಸಲು ಕಂತುಗಳ ಕಾಲಾ ವಕಾಶ ನೀಡುವ ವ್ಯವಸ್ಥೆಯನ್ನು ಸೇರಿಸಿ ರೆವೆನ್ಯೂ ರಿಕವರಿ ನಿಯಮದಲ್ಲಿ ತಿದ್ದುಪಡಿ ಸರಕಾರ ಪರಿಗಣಿಸುತ್ತಿದೆ. ಅದುವರೆಗೆ ಎಲ್ಲಾ ರಾಷ್ಟ್ರೀಕೃತ, ಶೆಡ್ಯೂಲ್ಡ್, ಕಮರ್ಶಿಯಲ್ ಬ್ಯಾಂಕ್‌ಗಳ ಸಾಲದ ಮೇಲೆ ಕಂದಾಯ ಇಲಾಖೆ ಮೂಲಕ ನಡೆಸುವ ಜಪ್ತಿ ಕ್ರಮ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ನಿರ್ದೇಶಿಸಿದೆ. ಇದೇ ವೇಳೆ ಸರ್ಫಾಸಿ ನಿಯಮ ಪ್ರಕಾರ ಬ್ಯಾಂಕ್‌ಗಳು ನೇರವಾಗಿ ನಡೆಸುವ ಜಪ್ತಿ ಕ್ರಮಗಳಲ್ಲಿ ಸರಕಾರಕ್ಕೆ ಮಧ್ಯ ಪ್ರವೇಶಿಸಲಾಗದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಆದ್ದರಿಂದ ಅಂತಹ ಕ್ರಮಗಳು ಮುಂದುವರಿ ಯುವುದರಿಂದ ಬ್ಯಾಂಕ್‌ಗಳಿಗೆ ಅಡ್ಡಿಯುಂಟಾಗದು. ಪ್ರವಾಹ, ಕೋವಿಡ್‌ನಿಂದಾಗಿ ಉಂಟಾದ ಆರ್ಥಿಕ ಸಂದಿಗ್ಧತೆ ಮುಂದುವರಿಯುತ್ತಿ ರುವಾಗ ರೆವೆನ್ಯೂ ರಿಕವರಿಗೆ ಮುಂದಾ ಗುವುದರ ವಿರುದ್ಧ ತೀವ್ರ ಪ್ರತಿಭಟನೆಗೆ ಎಡೆಯಾಗಿದೆ. ಈ ಕೃಷಿ ವಲಯದ ಸಂದಿಗ್ಧತೆ ಯಿಂದಾಗಿ ವಯನಾಡ್‌ನಲ್ಲಿ ಕೃಷಿಕರು ಸಾಲ ಮರು ಪಾವತಿಸಲು ಸಾಧ್ಯವಾಗದೆ ಜಪ್ತಿ ಕ್ರಮ ಎದುರಿಸುತ್ತಿ ರುವುದಾಗಿ ಅಲ್ಲಿನ ಜಿಲ್ಲಾಧಿಕಾರಿ ಸರಕಾರಕ್ಕೆ ತಿಳಿಸಿದರು. ಅಲ್ಲದೆ ಜಪ್ತಿ ಕ್ರಮಗಳ ಕಂಬಗಳನ್ನು ಬೀದಿ ಪಾಲಾಗಿ ಸುತ್ತಿದೆಯೆಂದೂ ತಿಳಿಸಲಾಗಿತ್ತು.
ಇದೇ ವೇಳೆ ಜಪ್ತಿ ವಿರುದ್ಧ ಆತ್ಮ ಹತ್ಯಾ ಸ್ಕ್ವಾಡ್ ರೂಪೀಕ ರಿಸುವ ಯತ್ನವೂ ಹಲವೆಡೆ ನಡೆಯುತ್ತಿರುವು ದಾಗಿಯೂ, ಆದ್ದರಿಂದ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಪರಿಹರಿಸಬೇಕೆಂದು ಪೊಲೀಸ್‌ನ ಸ್ಪೆಶಲ್ ಬ್ರಾಂಚ್ ವರದಿ ನೀಡಿತ್ತು. ಇದೇ ವೇಳೆ ಸರಕಾರ ಈ ತಿದ್ದುಪಡಿಯನ್ನು ಎಷ್ಟು ಅವಧಿಗೆ ಜ್ಯಾರಿ ಗೊಳಿಸುವುದೆಂಬ ಬಗ್ಗೆ ತಿಳಿದು ಬಂದಿಲ್ಲ.