ಬ್ಯಾಂಕ್ ಸೇರಿದಂತೆ ಹಲವು ಕಳವು ಪ್ರಕರಣಗಳ ಆರೋಪಿಯಾಗಿರುವ 17ರ ಬಾಲಕ ಕೊನೆಗೂ ಸೆರೆ
ಕಾಸರಗೋಡು: ಬ್ಯಾಂಕ್ ಕಳವು ಸೇರಿದಂತೆ ಹಲವು ಕಳವು ಪ್ರಕರಣಗಳ ಆರೋಪಿಯಾಗಿರುವ ೧೭ರ ಹರೆಯದ ಬಾಲಕನನ್ನು ಪತ್ತೆಹಚ್ಚಿ ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ.
ಈತ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ವ್ಯಕ್ತಿಯಾಗಿದ್ದಾನೆ. ಮೊನ್ನೆ ರಾತ್ರಿ ಪೆರಿಯ ಬಜಾರ್‌ನಲ್ಲಿರುವ ಭಾಸ್ಕರನ್ ಎಂಬವರ ಸುರಭಿ ಸ್ಟೋರ್ಸ್‌ನ ಮುಂದೆ ಸ್ಥಾಪಿಸಿದ್ದ ಸಿಸಿ ಟಿವಿ ಕ್ಯಾಮರಾವನ್ನು ಹಾನಿಗೆಡಹಿದ ಬಳಿಕ ಆ ಅಂಗಡಿಯ ಬೀಗ ಒಡೆದು ಒಳನುಗ್ಗಿ 1000 ರೂ. ನಗದು ಹಾಗೂ ಸುಮಾರು 2000 ರೂ.ಗಳ ಜೀನಸು ಸಾಮಗ್ರಿಗಳನ್ನು ಕಳವುಗೈಯ್ಯಲಾಗಿತ್ತು. ಆ ಬಗ್ಗೆ ಅಂಗಡಿ ಮಾಲಕ ಭಾಸ್ಕರನ್‌ರ ಪುತ್ರ ಸಜಿತ್ ನೀಡಿದ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದರು. ಅದಕ್ಕೆ ಸಂಬಂಧಿಸಿ ಪೊಲೀಸರು ಆ ಪರಿಸರದ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಆರೋಪಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿದೆ. ಮಾತ್ರವಲ್ಲ ಈ ಹಿಂದೆ ಚೆರ್ವತ್ತೂರಿನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಂಗ್ರಹಿಸಿದ ಸಿಸಿ ಟಿವಿ ಕ್ಯಾಮರಾ ದಲ್ಲೂ ಈತನ ದೃಶ್ಯ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ಶೋಧ ಕಾರ್ಯಾಚ ರಣೆಯಲ್ಲಿ ಆರೋಪಿಯನ್ನು ಸೆರೆಹಿಡಿ ಯುವಲ್ಲಿ ಕೊನೆಗೂ ಸಫಲರಾಗಿದ್ದಾರೆ.
ಒಂದು ತಿಂಗಳ ಹಿಂದೆ ಪೆರಿಯ ಬಜಾರ್‌ನಲ್ಲಿ ಟಿ. ಚಂದ್ರನ್ ಎಂಬವರ ತನಿಮಾ ಸ್ಟೋರ್‌ನಲ್ಲಿ ಕಳವು ನಡೆದಿತ್ತು. ಚಂದೇರ ಪಾಕನಾರ್ ಸಿನಿಮಾ ಟಾಕೀಸ್ ಬಳಿ ಕಾರ್ಯವೆಸಗುತ್ತಿರುವ ಇಸಾಫ್ ಎಂಬ ಶೆಡ್ಯೂಲ್ಡ್ ಬ್ಯಾಂಕ್‌ನಲ್ಲಿ ಕಳವು ಯತ್ನ ನಡೆದಿತ್ತು. ಈ ಬ್ಯಾಂಕ್‌ನ ಬೀಗ ಒಡೆದು ಒಳನುಗ್ಗಿ ಭದ್ರತಾ ಕೊಠಡಿಯನ್ನು ಒಡೆಯುವ ಯತ್ನವೂ ನಡೆದಿತ್ತು.
ಆಬಗ್ಗೆ ಬ್ಯಾಂಕ್ ಮೆನೇಜರ್ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದರು. ಇದೇ ಬ್ಯಾಂಕ್ ಕಟ್ಟಡದಲ್ಲಿ ಕಾರ್ಯವೆಸಗುತ್ತಿದ್ದ ಹೋಟೆಲೊಂದರ ಬೀಗ ಒಡೆದು ನಗದು ಅಪಹರಿಸಲಾಗಿತ್ತು. ಇದರ ಹೊರತಾಗಿ ಇತ್ತೀಚೆಗೆ ಚೆರ್ವತ್ತೂರಿನ ಪೆಟ್ರೋಲ್ ಬಂಕ್ ಕಚೇರಿಯಿಂದ ೭೦೦೦ ರೂ. ಕಳವುಗೈಯ್ಯಲಾಗಿತ್ತು. ಜೂನ್ 19ರಂದು ಪಾರಪಳ್ಳಿ ಮಖಾಂ ಮತ್ತು ಅಲ್ಲೇ ಪಕ್ಕದ ಸೂಪರ್ ಮಾರ್ಕೆಟ್‌ನಲ್ಲೂ ಕಳವು ಯತ್ನ ನಡೆದಿತ್ತು. ಈ ಎಲ್ಲಾ ಪ್ರಕರಣಗಳಲ್ಲಿ ಬಂಧಿತ ಬಾಲಕ ಆರೋಪಿಯಾಗಿದ್ದಾನೆಂದು ಪೊಲೀ ಸರು ತಿಳಿಸಿದ್ದಾರೆ. ಹೊಸದುರ್ಗ ಡಿವೈಎಸ್ಪಿ ಬಾಬು ಪೆರಿಂಙೋತ್ ನೇತೃತ್ವದ ಪೊಲೀಸರ ತಂಡ ಈತನನ್ನು ಸೆರೆಹಿಡಿದಿದೆ.