ಬ್ಯಾಡ್ಮಿಂಟನ್ ತಾರೆ ಸಿಂಧೂ ದಾಂಪತ್ಯ ಜೀವನಕ್ಕೆ
ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೈದರಾಬಾದ್ ನಿವಾಸಿ ಪ್ರೊಸಿಡೆಕ್ಸ್ ಟೆಕ್ನಾಲಜೀಸ್ ಎಂಬ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ವೆಂಕಟದತ್ತ ಸಾಯ್ ವರನಾಗಿದ್ದಾರೆ. ಈ ತಿಂಗಳ 22ರಂದು ಉದಯಪುರದಲ್ಲಿ ಇವರ ವಿವಾಹ ನಡೆಯಲಿದೆ. 24ರಂದು ವಿವಾಹ ಔತಣ ಕೂಟ ನಡೆಯಲಿದೆ. ವಿವಾಹದ ಬಗ್ಗೆ ಸಿಂಧೂರ ತಂದೆ ಪಿ.ವಿ. ರಮಣ ಬಹಿರಂಗ ಗೊಳಿಸಿದ್ದಾರೆ.