ಬ್ರಿಟಾನಿಯ ಬಿಸ್ಕೆಟ್ ಪ್ಯಾಕೆಟ್‌ನಲ್ಲಿ ತೂಕ ಕಡಿಮೆ: 60,000 ರೂ. ನಷ್ಟ ಪರಿಹಾರ ನೀಡಲು ಆದೇಶ

ತೃಶೂರು: ಬಿಸ್ಕೆಟ್ ಪ್ಯಾಕೆಟ್ನಲ್ಲಿ ತೂಕ ಕಡಿಮೆ ವಿರುದ್ಧ ತೃಶೂರ್ ನಿವಾಸಿ ಜೋರ್ಜ್ ತಟ್ಟಿಲ್ ಗ್ರಾಹಕರ ಪರಿಹಾರ ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ 60,000 ರೂ. ನಷ್ಟ ಪರಿಹಾರ ನೀಡಲು ಆದೇಶಿಸಲಾಗಿದೆ. ಬಿಸ್ಕೆಟ್ ಖರೀದಿಸಿದ ಅಂದಿನಿAದ ನಷ್ಟ ಪರಿಹಾರ ನೀಡುವವರೆಗೆ ಈ ಮೊತ್ತಕ್ಕೆ 9 ಶೇಕಡಾ ಬಡ್ಡಿ ನೀಡಲು ತೃಶೂರ್ ಗ್ರಾಹಕರ ನ್ಯಾಯಾಲಯ ಬ್ರಿಟಾನಿಯ ಇಂಡಸ್ಟ್ರೀಸ್ ಲಿಮಿಟೆಡ್ಗೆ ಆದೇಶಿಸಿದೆ. ಬ್ರಿಟಾನಿಯ ರಾಜ್ಯದಲ್ಲಿ ವಿತರಿಸುವ ಬಿಸ್ಕೆಟ್ಗಳಲ್ಲಿ ತೂಕದಲ್ಲಿ ಕಡಿಮೆ ಇದೆಯೋ ಎಂದು ಪರಿಶೀಲಿಸಲು ಲೀಗಲ್ ಮೆಟ್ರೋಲಜಿಗೆ ಆದೇಶಿಸ ಲಾಗಿದೆ. ಬ್ರಿಟಾನಿಯ ನ್ಯೂಟ್ರಿಚಾಯ್ಸ್ ಬಿಸ್ಕೆಟ್ ಅಂಗಡಿಯಿAದ ಖರೀದಿಸಿದ ಬಳಿಕ ಜೋರ್ಜ್ ಅದನ್ನು ತೂಕ ಮಾಡಿ ನೋಡಿದ್ದರು. ತಮಾಷೆಗೆಂದು ಮಾಡಿದ ಈ ಕೃತ್ಯದಿಂದ ಪ್ಯಾಕೆಟ್ನಲ್ಲಿ 300 ಗ್ರಾಂ ಎಂದು ದಾಖಲಿಸಲಾ ಗಿದ್ದರೂ 52 ಗ್ರಾಂ ಅದರಿಂದ ಕಡಿಮೆಯಿರುವುದು ಕಂಡು ಬಂದಿದೆ. ಇದರಿಂದ ಬಿಸ್ಕೆಟ್ನ ಹಲವಾರು ಪ್ಯಾಕೆಟ್ಗಳನ್ನು ಖರೀದಿಸಿ ಇವರು ತೂಕ ಮಾಡಿ ನೋಡಿದರು. ಇವುಗಳೆಲ್ಲ ದರಲ್ಲೂ ಅಳತೆಗಿಂತ ಕಡಿಮೆ ಇರುವುದು ಕಂಡು ಬಂದಿದೆ. ಈ ಹಿನ್ನೆಲೆ ಯಲ್ಲಿ ತೃಶೂರು ಗ್ರಾಹಕರ ನ್ಯಾಯಾಲಯಕ್ಕೆ ಇವರು ದೂರು ನೀಡಿದ್ದರು.

You cannot copy contents of this page