‘ಬ್ಲೀಡಿಂಗ್ ಐ. ವೈರಸ್’ ಹೊಸ ಸೋಂಕು ಪತ್ತೆ: ವಿಶ್ವದಾದ್ಯಂತ ಜಾಗ್ರತಾ ನಿರ್ದೇಶ
ಕಾಸರಗೋಡು: ವಿವಿಧ ರೀತಿಯ ಸೋಂಕು ಜನರ ಜೀವವನ್ನೇ ಹಿಂಡುತ್ತಿರುವ ವೇಳೆಯಲ್ಲೇ ಇದೀಗ ‘ಬ್ಲೀಡಿಂಗ್ ಐ ವೈರಸ್’ ಎಂಬ ಹೊಸ ರೋಗ ಕಾಣಿಸಿಕೊಂಡಿದೆ. ಇದನ್ನು ‘ಮಾರ್ಬರ್ಗ್’ ಎಂದೂ ಕರೆಯಲಾ ಗುತ್ತಿದೆ.
ವಿಶ್ವದಾದ್ಯಂತ ೧೭ ದೇಶಗಳಲ್ಲಿ ಬ್ಲೀಡಿಂಗ್ ಐ ವೈರಸ್ ಹರಡಿದ್ದು, ಇದು ರುವಾಂಡಾದಲ್ಲಿ ೧೫ಕ್ಕೂ ಹೆಚ್ಚು ಜೀವ ಗಳನ್ನು ಈಗಾಗಲೇ ಬಲಿತೆಗೆದುಕೊಂ ಡಿದೆ. ನೂರಾರು ಮಂದಿಗೆ ಈ ಸೋಂಕು ತಗಲಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳಿಗೂ ತೀವ್ರ ಜಾಗ್ರತಾ ನಿರ್ದೇಶ ನೀಡಿದೆ.
‘ಬ್ಲೀಡಿಂಗ್ ಐ’ ಸೋಂಕು ತಗಲಿದರೆ ಅದು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಈ ವೈರಸ್ ಎಬೋಲಾ ಜಾತಿಗೆ ಸೇರಿದ್ದಾಗಿದೆ. ಇದು ಹಣ್ಣು ತಿನ್ನುವ ಬಾವಲಿಗಳು ಮತ್ತು ಪ್ರಾಣಿಗಳಿಂದ ಹೆಚ್ಚಾಗಿ ಹರಡುತ್ತಿದೆ. ಮತ್ತು ಈ ವೈರಸ್ ಸೋಂಕಿದ ವ್ಯಕ್ತಿಯ ದ್ರವಗಳಾದ ರಕ್ತ ಲಾಲಾರಸ ಅಥವಾ ಮೂತ್ರದೊಂದಿಗೆ ನೇರ ಸಂಪರ್ಕದ ಮೂಲಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗಳು ತೀವ್ರ ಜ್ವರ, ತೀವ್ರ ತಲೆನೋವು, ಸ್ನಾಯು ನೋವು, ವಾಂತಿ ಮತ್ತು ಅತಿಸಾರ ಅನುಭವಿಸಬಹುದು. ತೀವ್ರ ತರವಾದ ಪ್ರಕರಣಗಳಲ್ಲಿ ಇದು ಆಂತರಿಕ ರಕ್ತಸ್ರಾವ, ತಲೆತಿರುಗುವಿಕೆ, ಹೊಟ್ಟೆ ನೋವು, ಅಂಗ ವೈಫಲ್ಯ ಮತ್ತು ಆಘಾತಕ್ಕೆ ಕಾರಣವಾಗಬಹುದು. ಮಾತ್ರವಲ್ಲ ಸಾವು ಸಂಭವಿಸಬಹುದು.
ಸ್ಟ್ರೈನ್ ಮತ್ತು ಲಭ್ಯವಿರುವ ಶುಶ್ರೂಷೆಯ ಗುಣಮಟ್ಟವನ್ನು ಅವಲಂಭಿಸಿ ಮರಣ ಪ್ರಮಾಣ ಶೇ. ೨೪ರಿಂದ ಶೇ. ೮೮ರವರೆಗೆ ಬದಲಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.
ಈ ಸೋಂಕು ತಗಲಿದವರು ಅನಪೇಕ್ಷಿತ ತೂಕ ನಷ್ಟ, ರಕ್ತಸಿಕ್ತ ವಾಂತಿ, ಮೂಗು, ಕಣ್ಣು, ಬಾಯಿ ಅಥವಾ ಯೋನಿಯಿಂದ ರಕ್ತಸ್ರಾವ ಗೊಂದಲ ಗಳು ಅನುಭವವಾಗುತ್ತದೆ. ರೋಗಿಗಳಲ್ಲಿ ಆಳವಾದ ಕಣ್ಣುಗಳು, ಭಾವರಹಿತ ಮುಖಗಳು ಮತ್ತು ತೀವ್ರ ಆಲಸ್ಯವೂ ತಲೆದೋರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಬರ್ಗ್ ವೈರಸ್‌ಗೆ ಯಾವುದೇ ರೀತಿಯ ನಿರ್ದಿಷ್ಟ ಆಂಟಿವೈರಸ್ ಚಿಕಿತ್ಸೆ ಅಥವಾ ಲಸಿಕೆ ಇಲ್ಲ.
ಪುನರ್ಜಲೀಕರಣ ಮತ್ತು ರೋಗದ ಲಕ್ಷಣದ ನಿರ್ವಹಣೆಯಂತಹ ಪೋಷಕ ಆರೈಕೆಯು ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ಅಭಿವೃದ್ಧಿಪಡಿಸಲು ಜಾಗತಿಕ ಪ್ರಯತ್ನಗಳೆಲ್ಲಾ ನಡೆಯುತ್ತಿದೆ.