ಭಯೋತ್ಪಾದಕ ನಿಗ್ರಹ ಪಡೆಯ ಮಿಂಚಿನ ಕಾರ್ಯಾಚರಣೆ: ಹೊಸದುರ್ಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆ ಬಂಧನ
ಕಾಸರಗೋಡು: ಕಣ್ಣೂರು ಭಯೋ ತ್ಪಾದಕ ನಿಗ್ರಹದಳ (ಎಟಿಎಸ್) ಹೊಸದುರ್ಗ ಪೊಲೀಸರ ಸಹಾಯ ದೊಂದಿಗೆ ನಡೆಸಿದ ಮಿಂಚಿನ ಕಾರ್ಯಾ ಚರಣೆಯಲ್ಲಿ ನಕಲಿ ದಾಖಲು ಪತ್ರ ಗಳೊಂದಿಗೆ ನೆಲೆಸಿದ್ದ ಬಾಂಗ್ಲಾ ಪ್ರಜೆ ಯಾದ ಯುವಕನನ್ನು ಬಂಧಿಸಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆ ಗೊಳಪಟ್ಟ ಬಲ್ಲಾ ಆಲಯಿಲ್ ಪೂಡಂಕಲ್ ಕ್ವಾರ್ಟರ್ಸ್‌ನಲ್ಲಿ ಈತ ಅನಧಿಕೃತವಾಗಿ ವಾಸಿಸುತ್ತಿದ್ದ. ಆ ಬಗ್ಗೆ ಲಭಿಸುತ್ತಿದ್ದ ಗುಪ್ತ ಮಾಹಿತಿಯಂತೆ ಎಟಿಎಸ್ ಮತ್ತು ಪೊಲೀಸರ ತಂಡ ಅಲ್ಲಿಗೆ ಮಿಂಚಿನ ದಾಳಿ ನಡೆಸಿ ಆತ ನನ್ನು ಬಂಧಿಸುವಲ್ಲಿ ಸಫಲವಾಗಿದೆ. ಬಂಧಿತನ ಕೈಯಲ್ಲಿದ್ದ ಗುರುತುಚೀಟಿ ಯಲ್ಲಿ ಸಾಬಿರ್ ಶೇಕ್ ನಾಬಿಯ (24) ಎಂದು ನಮೂದಿಸಲಾಗಿತ್ತು. ಆ ಬಗ್ಗೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಅದು ನಕಲಿಯಾಗಿದೆಯೆಂದು ಪೊಲೀ ಸರು ತಿಳಿಸಿದ್ದಾರೆ. ಮಾತ್ರವಲ್ಲ ಆತನ ಕೈಯಲ್ಲಿ ಯಾವುದೇ ಅಸಲಿ ಗುರುತು ಚೀಟಿ ಇರಲಿಲ್ಲ. ಮೊಬೈಲ್‌ನಲ್ಲಿ ತೆಗೆದ ಫೋಟೋ ಮಾತ್ರವೇ ಆತ ಹೊಂದಿ ದ್ದನು. ತನ್ನ ಅಸಲಿ ದಾಖಲುಪತ್ರಗಳು ಯಾತ್ರೆ ಮಧ್ಯೆ ನಷ್ಟಗೊಂಡಿದೆಯೆಂದು ಆತ ಪೊಲೀಸರಲ್ಲಿ ತಿಳಿಸಿದ್ದಾನೆ. ಪಶ್ಚಿಮ ಬಂ ಗಾಲದಲ್ಲಿ ನನ್ನ ಹಲವು ಸಂಬಂಧಿಕರಿದ್ದು ಅವರೆಲ್ಲಾ ಈಗ ಮೃತಪಟ್ಟಿದ್ದಾರೆಂದೂ ಆತ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಆದರೆ ಪೊಲೀಸರು ನಡೆಸಿದ ತನಿಖೆ ಯಲ್ಲಿ ಆತನ ಹೇಳಿಕೆ ಗಳೆಲ್ಲವೂ ಹುಸಿಯಾಗಿದೆಯೆಂದೂ, ಆತ ಬಾಂಗ್ಲಾ ದೇಶ ಪ್ರಜೆಯಾಗಿರುವು ದಾಗಿಯೂ ಬಳಿಕ ಸ್ಪಷ್ಟಗೊಂಡಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಆತನಿಗೆ ಆ ಕ್ವಾರ್ಟರ್ಸ್ ನಲ್ಲಿ ತಂಗಲು ಸೌಕರ್ಯ ಏರ್ಪಡಿಸಿದ್ದ ಕ್ವಾರ್ಟರ್ಸ್ ಮಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗು ವುದೆಂದು ಹೊಸದುರ್ಗ ಡಿವೈಎಸ್ಪಿ ಬಾಬು ಪೆರುಂಙೋತ್ತ್ ಮುನ್ನೆಚ್ಚರಿಕೆ ನೀಡಿದ್ದಾರೆ. ಅದರಂತೆ ಆ ಕ್ವಾರ್ಟರ್ಸ್ ಮಾಲಕನನ್ನು ವಿಚಾರu ಗೊಳಪಡಿಸಿದ ಬಳಿಕ ಆತನ ವಿರುದ್ಧ ಸೂಕ್ತ ಕ್ರಮ ಕೊಳ್ಳಲಾಗುವುದೆಂದು ಡಿವೈಎಸ್ಪಿ ತಿಳಿಸಿದ್ದಾರೆ.
ಇದೇ ರೀತಿ ಪಶ್ಚಿಮ ಬಂಗಾಲದವ ನೆಂಬ ಸೋಗಿನಲ್ಲಿ ಹೊಸದುರ್ಗದ ಪಡನ್ನಕ್ಕಾಡಿಗೆ ಬಂದು ಅಲ್ಲಿನ ಕ್ವಾರ್ಟ ರ್ಸ್‌ನಲ್ಲಿ ತಂಗಿ ದ್ದ ಭಯೋತ್ಪಾದP ನೋರ್ವನನ್ನು ಅಸ್ಸಾಂ ಪೊಲೀಸರು ತಿಂಗಳ ಹಿಂದೆಯೇ ಬಂಧಿಸಿದ್ದರು. ಹಿಂದೂ ನೇತಾರರನ್ನು ಹಾಗೂ ಕೆಲವು ಉನ್ನತ ರಾಜಕೀಯ ಪಕ್ಷದ ಮುಖಂಡರನ್ನು ಹತ್ಯೆಗೈಯ್ಯಲು ಹಾಗೂ ಅದರ ಹೆಸರಲ್ಲಿ ಕೋಮು ಗಲಭೆ ಭುಗಿದೇಳುವಂತೆ ಮಾಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವಂತೆ ಮಾಡುವ ಸಂಚಿನಿಂದ ಆತ ಕಾಸರಗೋಡಿಗೆ ಬಂದಿದ್ದಾನೆಂದು ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಇದೇ ರೀತಿ ಬಾಂಗ್ಲಾದೇಶದಿಂದ ಲಕ್ಷಾಂತರ ಮಂದಿ ಗಡಿಪ್ರದೇಶ ಮೂಲಕ ಭಾರತದೊಳಗೆ ಅಕ್ರಮವಾಗಿ ನುಸುಳಿ ದೇಶಾದ್ಯಂತವಾಗಿ ಹಲವು ರಾಜ್ಯಗಳಲ್ಲಿ ಪಶ್ಚಿಮಬಂಗಾಲದವರೆಂಬ ಸೋಗಿನಲ್ಲಿ ವಾಸಿಸುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ವಿಭಾಗಕ್ಕೆ ಸ್ಪಷ್ಟ ಮಾಹಿತಿ ಲಭಿಸಿದೆ. ಇವರಿಗೆ ಅಗತ್ಯದ ನಕಲಿ ಆಧಾರ್‌ಕಾರ್ಡ್, ಮತದಾನ ಗುರುತುಚೀಟಿ ಹಾಗೂ ಇತರ ನಕಲಿ ದಾಖಲುಪತ್ರಗಳನ್ನು ನೀಡುವ ಹಲವು ಕೇಂದ್ರಗಳು ಪಶ್ಚಿಮ ಬಂಗಾಲ ಹಾಗೂ ಇತರೆಡೆಗಳಲ್ಲಿ ಕಾರ್ಯವೆಸಗುತ್ತಿ ದೆಯೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಕೇರಳದಲ್ಲಿ ಅತೀ ಹೆಚ್ಚು ಎಂಬಂತೆ ಎರ್ನಾಕುಳಂ ಜಿಲ್ಲೆಯ ವಿವಿಧೆಡೆಗಳಲ್ಲಿ ಸಹಸ್ರಾರು ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ. ಆ ಪೈಕಿ ಯುವಜೋಡಿಯೊಂದನ್ನು ಕೆಲವು ದಿನಗಳ ಹಿಂದೆಯಷ್ಟೇ ಪೊಲೀಸರ ಬಂಧಿಸಿದ್ದರು.