ಭಯೋತ್ಪಾದನೆ ವಿರುದ್ಧ ದೇಶದ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಿ ಕೇರಳ-ಕೇಂದ್ರ ವಿವಿಯಲ್ಲಿ  ಕಾರ್ಯಾಗಾರ

ಪೆರಿಯ: ಪಾಕಿಸ್ತಾನದ ಭಯೋ ತ್ಪಾದನೆ ವಿರುದ್ಧ ಭಾರತ ನಡೆಸುವ ಹೋರಾಟಕ್ಕೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೂರ್ಣ ಬೆಂಬಲ ನೀಡಿದೆ. ಸೈನ್ಯದ ಹಾಗೂ ಸರಕಾರದ ಕ್ರಮಗಳಿಗೆ  ಬೆಂಬಲ ಘೋಷಿಸಿ ಎನ್‌ಎಸ್‌ಎಸ್‌ನ ನೇತೃತ್ವದಲ್ಲಿ ಕ್ಯಾಂಪಸ್‌ನಲ್ಲಿ ಮಾನವ ಸರಪಳಿ ನಡೆಸ ಲಾಯಿತು. ರಾಷ್ಟ್ರ ಪ್ರಥಮ ಎಂಬ ಕಾರ್ಯಾಗಾರ ದಂಗವಾಗಿ ಹಮ್ಮಿ ಕೊಂಡ ಕಾರ್ಯಕ್ರಮದಲ್ಲಿ  ಅಧ್ಯಾಪ ಕರು, ನೌಕರರು, ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಜೊತೆಗೂಡಿದರು. ಆಪರೇಶನ್ ಸಿಂಧೂರ ಮೂಲಕ ಆಶ್ಚರ್ಯಕರ ತಿರುಗೇಟು ಭಾರತ ನೀಡಿದೆಯೆಂದು ವೈಸ್ ಚಾನ್ಸಲರ್  ಪ್ರೊ. ಸಿದ್ದು ಪಿ ಅಲ್ಗುರ್ ನುಡಿದರು. ವಾಯುಸೇನೆಯ ಮಾಜಿ ಅಧಿಕಾರಿ ಸ್ಕ್ವಾಂಡ್ರನ್ ಲೀಡರ್ ಕೆ. ನಾರಾಯ ಣನ್ ನಾಯರ್ ಮಾತನಾಡಿದರು. ರಿಜಿಸ್ಟ್ರಾರ್ ಇನ್ ಚಾರ್ಜ್ ಪ್ರೊ. ರಾಜೇಂದ್ರ ಪಿಲಾಂಕಟ್ಟೆ ಸ್ವಾಗತಿಸಿ, ಎನ್‌ಎಸ್‌ಎಸ್ ಪ್ರೋಗ್ರಾಂ ಕೋ-ಆರ್ಡಿನೇಟರ್ ಡಾ. ಎಸ್. ಅನ್ಬಳಗಿ ವಂದಿಸಿದರು. ಡಾ. ಆರ್. ಜಯಪ್ರಕಾಶ್ ಸಹಿತ ಹಲವರು ಭಾಗವಹಿಸಿದರು.

You cannot copy contents of this page