ಭರಣಿಯೊಳಗೆ ತಲೆ ಸಿಲುಕಿಕೊಂಡು ಅಲೆದಾಡುತ್ತಿರುವ ನಾಯಿ ಆಹಾರ ಸೇವಿಸಲಾಗದೆ ಜೀವನ್ಮರಣ ಹೋರಾಟದಲ್ಲಿ
ಕುಂಬಳೆ: ಪ್ಲಾಸ್ಟಿಕ್ ಭರಣಿಯೊಳಗೆ ತಲೆ ಸಿಲುಕಿಕೊಂಡ ನಾಯಿಯೊಂದು ವಿವಿಧೆಡೆ ಅಲೆದಾಡುತ್ತಿದೆ. ಭರಣಿಯಿಂದ ನಾಯಿಯ ತಲೆಯನ್ನು ಹೊರತೆಗೆ ಯಲು ನಾಗರಿಕರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಅಗ್ನಿಶಾಮಕದಳಕ್ಕೆ ವಿಷಯ ತಿಳಿಸಿದರೂ ಪ್ರಯೋಜನವಾಗ ಲಿಲ್ಲವೆಂದು ನಾಗರಿಕರು ತಿಳಿಸಿದ್ದಾರೆ.
ಕುಂಬಳೆ ಬದ್ರಿಯಾ ನಗರದಲ್ಲಿ ದಯನೀಯ ಸ್ಥಿತಿಯಲ್ಲಿ ನಾಯಿ ಅಲೆದಾಡುತ್ತಿರುವುದು ಕಂಡುಬಂದಿದೆ. ಮೂರು ದಿನಗಳ ಹಿಂದೆ ಎಲ್ಲಿಂದಲೋ ಪ್ಲಾಸ್ಟಿಕ್ ಭರಣಿ ತಲೆಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ನಾಯಿ ಬದ್ರಿಯ ನಗರಕ್ಕೆ ತಲುಪಿದೆ. ನಾಯಿಯನ್ನು ಹಿಡಿದು ಭರಣಿ ತೆಗೆಯಲು ಕೆಲವರು ಪ್ರಯತ್ನಿಸಿದ್ದಾರೆ. ಆದರೆ ನಾಯಿ ಓಡಿ ಹೋಗುತ್ತಿರುವುದರಿಂದ ಪ್ರಯತ್ನ ವಿಫಲಗೊಂಡಿತು. ಭರಣಿ ತಲೆಯಲ್ಲಿ ಸಿಲುಕಿರುವುದರಿಂದ ಆಹಾರ ಸೇವಿಸಲು ಕೂಡಾ ನಾಯಿಗೆ ಸಾಧ್ಯವಾಗುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ನಾಯಿ ಸಾವಿಗೀ ಡಾಗುವ ಸಾಧ್ಯತೆ ಇದೆಯೆಂದೂ, ಅದಕ್ಕಿಂತ ಮುಂಚೆ ನಾಯಿಯನ್ನು ರಕ್ಷಿಸುವ ಕೆಲಸ ನಡೆಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.