ಭಾರತಕ್ಕೆ ಅಪ್ಪಳಿಸಿದ ಬಿಸಿಗಾಳಿ: ಕೇರಳ ಸಹಿತ ಒಂಭತ್ತು ರಾಜ್ಯಗಳಲ್ಲಿ ಜಾಗ್ರತಾ ನಿರ್ದೇಶ
ನವದೆಹಲಿ: ಭಾರತಕ್ಕೆ ಬಿಸಿ ಗಾಳಿ ಅಪ್ಪಳಿಸಿದ್ದು, ಇದರಿಂದಾಗಿ ಕೇಂದ್ರ ಹವಾಮಾನ ಇಲಾಖೆ ದೇಶದ ಒಂಭತ್ತು ರಾಜ್ಯಗಳಲ್ಲಿ ಭಾರೀ ಜಾಗ್ರತಾ ನಿರ್ದೇಶ ನೀಡಿದೆ.
ಭಾರತದ ವಿವಿಧ ಭಾಗಗಳಲ್ಲಿ ತಾಪಮಾನ ಮಟ್ಟ 40 ಡಿಗ್ರಿ ಸೆಲ್ಶಿಯಸ್ ದಾಟಿದೆ. ಇಷ್ಟೊಂದು ಪ್ರಮಾಣಕ್ಕೆ ತಾಪಮಾನ ಮಟ್ಟ ಏರಿರುವುದು 1901ರ ಬಳಿಕ ಇದು ಮೊದಲ ಬಾರಿಯಾಗಿದೆ.
ಕೇರಳ, ಒಡಿಶಾ, ಕರ್ನಾಟPದ ಕೆಲವು ಭಾಗಗಳು, ರಾಜಸ್ಥಾನ, ಗುಜರಾತ್, ಝಾರ್ಖಂಡ್, ಛತ್ತೀಸ್‌ಗಡ್, ಪಶ್ಚಿಮ ಬಂಗಾಲ ಹಾಗೂ ಉತ್ತರ ತೆಲಂಗಾನದಲ್ಲಿ ಈ ಜಾಗ್ರತಾ ನಿರ್ದೇಶ ನೀಡಲಾಗಿದೆ. ಈ ರಾಜ್ಯಗಳಲ್ಲಿ ಶಾಖಾ ಸಂಬಂಧಿತ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಇದು ಮುಂಬರುವ ಸುಡು ಬೇಸಿ ಗೆಯ ಆರಂಭಿಕ ಸೂಚನೆ ಯನ್ನು ಸೂಚಿಸುತ್ತಿದೆ ಯೆಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳುತ್ತಿ ದ್ದಾರೆ. ಕೇರಳದಲ್ಲಿ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲೇ ತಾಪಮಾನ ಏರತೊಡಗಿದೆ. ಸೂರ್ಯಾ ಘಾತಕ್ಕೊಳಗಾಗಿ ಕಾಸರಗೋಡು ಜಿಲ್ಲೆಯ ಓರ್ವ ಸೇರಿದಂತೆ ಕೇರಳದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿದೆ.
ತಾಪಮಾನ ಮಟ್ಟ ದಿನೇ ದಿನೇ ಹೆಚ್ಚಾಗಿ ದಾಖಲೆಯ ಬೇಸಿಗೆ ಋತುವನ್ನು ನಿರ್ಮಿಸತೊಡಗಿದೆ. ಪೂರ್ವ ರಾಜ್ಯಗಳ ಅಸಾಮಾನ್ಯ ವಾದ ಹಾಗೂ ದೀರ್ಘ ಮತ್ತು ತೀವ್ರವಾದ ಶಾಖದ ಅಲೆಗಳನ್ನು ಎದುರಿಸತೊಡಗಿದೆ. ಇದು ಜನರ ಆರೋಗ್ಯದ ಮೇಲೆ ಮಾತ್ರವಲ್ಲ ಜೀವನೋಪಮಾರ್ಗದ ಮೇಲೂ ತೀವ್ರ ಪರಿಣಾಮ ಬೀರತೊಡಗಿದೆ.
ತಾಪಮಾನಮಟ್ಟ ತಾರಕ್ಕೇ ರತೊಡಗಿರುವುದು ಇನ್ನೊಂದೆಡೆ ಬೇಸಿಗೆ ಮಳೆ ಸುರಿಯಲು ದಾರಿ ಮಾಡಿಕೊಡಲಿದೆ. ಹೀಗೆ ಬೇಸಿಗೆ ಮಳೆ ಸುರಿದಲ್ಲಿ ತಾಪಮಾನ ಮಟ್ಟ ಇಳಿಯಲಿದೆ ಎಂದು ಇಲಾಖೆ ತಿಳಿಸಿದೆ.