ಭಾರತದಲ್ಲಿ ಬೇಹುಗಾರಿಕೆ ನಡೆಸಲು ೩೮ ನಕಲಿ ಆಧಾರ್ ಕಾರ್ಡ್ ಪತ್ತೆ: ೫ ಕಾರ್ಡ್ ಪಡೆದಿದ್ದು ಮಲಪ್ಪುರದಿಂದ, ಸಮಗ್ರ ತನಿಖೆ ಆರಂಭ
ಕಾಸರಗೋಡು: ಭಾರತದಲ್ಲಿ ಬೇಹುಗಾರಿಕೆ ನಡೆಸಲು ಉಗ್ರಗಾಮಿ ಗಳು ನಕಲಿ ಆಧಾರ್ ಕಾರ್ಡ್ಗಳನ್ನು ಬಳಸಿ ದೇಶದೊಳಗೆ ನುಗ್ಗಿದ್ದಾರೆಂದೂ, ಹೀಗೆ ತಯಾರಿಸಲಾದ ೩೮ ನಕಲಿ ಆಧಾರ್ ಕಾರ್ಡ್ಗಳನ್ನುಕೇಂದ್ರ ಗುಪ್ತಚರ ವಿಭಾಗ ಪತ್ತೆಹಚ್ಚಿ ಬಳಿಕ ಅದನ್ನು ರದ್ದುಪಡಿಸಲಾಗಿದೆ.
ಈ ಪೈಕಿ ೫ ನಕಲಿ ಆಧಾರ್ ಕಾರ್ಡ್ಗಳನ್ನು ಮಲಪ್ಪುರಂ ಜಿಲ್ಲೆಯ ತಿರೂರ್ನ ಅಕ್ಷಯ ಕೇಂದ್ರವೊಂದರ ಮೂಲಕ ತಯಾರಿಸಲಾಗಿದೆ ಎಂಬ ಮಾಹಿತಿ ಕೇಂದ್ರ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ಇನ್ನೊಂದೆಡೆ ಕೇರಳ ಸೈಬರ್ ಕ್ರೈಂ ವಿಭಾಗವೂ ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ.
ಯುನೀಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯ ನಡೆಸಿದ ಪರಿಶೀಲನೆಯಲ್ಲಿ ಈ ನಕಲಿ ಕಾರ್ಡ್ಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ ೫ ನಕಲಿ ಆಧಾರ್ ಕಾರ್ಡ್ಗಳನ್ನು ತಿರೂರ್ ಆಲಿಂಗಾಲ್ ಅಕ್ಷಯ ಕೇಂದ್ರವೊಂದರಲ್ಲಿ ಜನವರಿ ೧೮ರಂದು ಆ ಕೇಂದ್ರದ ಆಧಾರ್ ಕಾರ್ಡ್ ಯಂತ್ರವನ್ನು ಹ್ಯಾಕ್ ಮಾಡಿ ನಿರ್ಮಿಸಲಾಗಿದೆ. ದಿಲ್ಲಿಯ ಯುಐಡಿ ಅಡ್ಮಿನ್ ಎಂದು ಪರಿಚಯಪಡಿಸಿದ ವ್ಯಕ್ತಿಯೋರ್ವ ಈ ಅಕ್ಷಯ ಕೇಂದ್ರಕ್ಕೆ ಫೋನ್ ಕರೆ ಮಾಡಿದ್ದಾನೆ. ೧೦ ಸಾವಿರ ಎನ್ರೋಲ್ಮೆಂಟ್ ಪೂರ್ಣಗೊಂ ಡಲ್ಲಿ ಅದನ್ನು ವೆರಿಫಿಕೇಶನ್ ನಡೆಸಬೇಕಾಗಿದೆ. ವೆರಿಫಿಕೇಶನ್ನಂಗ ವಾಗಿ ದಸ್ಕ್ ಎಂಬ ಸಾಫ್ಟ್ ವೇರ್ ಕನೆಕ್ಟ್ ಮಾಡುವಂತೆ ಫೋನ್ ಕರೆದ ವ್ಯಕ್ತಿ ಅಕ್ಷಯ ಕೇಂದ್ರದವರಿಗೆ ತಿಳಿಸಿದ್ದಾನೆ. ಮಾತ್ರವಲ್ಲ ಆ ಮಧ್ಯೆ ತಮಗೆ ಕೆಲವು ವ್ಯಕ್ತಿಗಳ ಆಧಾರ್ ಕಾರ್ಡ್ನ್ನು ಎನ್ರೋಲ್ ಮಾಡಬೇ ಕಾಗಿದೆ ಆ ಬಳಿಕವಷ್ಟೇ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆಯೆಂದು ಆ ವ್ಯಕ್ತಿ ತಿಳಿಸಿದ್ದಾನೆ. ಅದರಂತೆ ಅಕ್ಷಯ ಕೇಂದ್ರದವರು ಆ ಕೆಲಸವನ್ನು ನಿರ್ವಹಿಸಿದರು. ಆ ಬಳಿಕ ಪರಿಶೀಲನೆ ಕ್ರಮ ಪೂರ್ಣಗೊಂಡಿದೆಯೆಂದು ಹೇಳಿ ಫೋನ್ ಕರೆದ ವ್ಯಕ್ತಿ ತಕ್ಷಣ ಫೋನ್ ಕಟ್ ಮಾಡಿದ್ದಾನೆ. ನಂತರ ಪ್ರೊಜೆಕ್ಟ್ ಆಫೀಸ್ನಿಂದ ಅಕ್ಷಯ ಕೇಂದ್ರಕ್ಕೆ ಮೈಲ್ ಸಂದೇಶ ಬಂದಾಗಲಷ್ಟೇ ನಡೆದ ವಂಚನೆ ಅಕ್ಷಯ ಕೇಂದ್ರದವರ ಗಮನಕ್ಕೆ ಬಂದಿದೆ.
ಈ ಅಕ್ಷಯ ಕೇಂದ್ರದಲ್ಲಿ ಆಧಾರ್ ಕಾರ್ಡ್ ಪಡೆದ ಹಲವರ ಹೆಸರು ಮತ್ತು ವಿಳಾಸವನ್ನು ಬಳಸಿ ಈ ರೀತಿ ೩೮ ನಕಲಿ ಆಧಾರ್ ಕಾರ್ಡ್ ಗಳನ್ನು ಉಗ್ರಗಾಮಿಗಳು ಬೇಹುಗಾರಿಕೆ ನಡೆಸಲು ನಿರ್ಮಿಸಿದ್ದಾರೆಂಬ ಕಳವಳ ಕಾರಿ ಮಾಹಿತಿ ಬಳಿಕ ತನಿಖಾ ತಂಡಕ್ಕೆ ಲಭಿಸಿದೆ. ಆ ಎಲ್ಲಾ ನಕಲಿ ಕಾರ್ಡ್ ಗಳನ್ನು ಬಳಿಕ ರದ್ದುಪಡಿಸಲಾಗಿದೆ.