ಭಾರತ-ಪಾಕಿಸ್ತಾನ ಘರ್ಷಣೆ ಹಿನ್ನೆಲೆ: ಎಡರಂಗ ಸರಕಾರದ ವಾರ್ಷಿಕ ಕಾರ್ಯಕ್ರಮ ಮುಂದೂಡಿಕೆ

ತಿರುವನಂತಪುರ: ಭಾರತ-ಪಾಕಿ ಸ್ತಾನದ ನಡುವೆ ಮುಂದುವರಿಯುತ್ತಿರುವ ಘರ್ಷಣೆ ಹಿನ್ನೆಲೆಯಲ್ಲಿ ಎಡರಂಗ ಸರಕಾರದ 4ನೇ ವಾರ್ಷಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

4ನೇ ವಾರ್ಷಿಕದಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಿರುವ ವಸ್ತು ಪ್ರದರ್ಶನ ಮಾತ್ರವೇ ನಿಗದಿತ ಸಮಯ ತನಕ ಮುಂದುವರಿಯಲಿದೆ. ವಾರ್ಷಿಕದಂಗವಾಗಿ ನಡೆಸಲು ತೀರ್ಮಾನಿಸಲಾಗಿರುವ ಎಲ್ಲಾ  ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. 6 ಜಿಲ್ಲೆಗಳಲ್ಲಿ  ಇಂತಹ ಕಾರ್ಯಕ್ರಮಗಳನ್ನು ಈಗಾಗಲೇ ಮುಂದೂಡಲಾಗಿದೆ. ಆನ್‌ಲೈನ್ ಮೂಲಕ ನಡೆಸಲಾದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯ ತಿಳಿಸಿದ್ದಾರೆ. ಮಾತ್ರವಲ್ಲದೆ ಎಡರಂಗ ಸರಕಾರದ ನಾಲ್ಕನೇ ವಾರ್ಷಿಕದಂಗವಾಗಿ ಎಡರಂಗ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾ ಗಿರುವ ಎಲ್ಲಾ ರ‍್ಯಾಲಿಗಳನ್ನೂ ಮುಂ ದೂಡಲಾಗಿದೆ ಯೆಂದು ಇನ್ನೊಂದೆಡೆ ಎಡರಂಗ ರಾಜ್ಯ ಸಂಚಾಲಕ ಟಿ.ಪಿ. ರಾಮಕೃಷ್ಣನ್ ತಿಳಿಸಿದ್ದಾರೆ.

You cannot copy contents of this page