ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಯೋಧರ ಭರ್ಜರಿ ಬೇಟೆ: 13 ಸಾವಿರ ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ
ನವದೆಹಲಿ: ಬಾಂಗ್ಲಾ ದೇಶದಲ್ಲಿ ಮತೀಯ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮುಂದುವರಿಯುತ್ತಿ ರುವಂತೆಯೇ ತ್ರಿಪುರಾದ ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತೀಯ ಗಡಿಭದ್ರತಾ ಪಡೆ (ಬಿಎಸ್ಎಫ್) ಯೋಧರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಚಿನ್ನಾ ಭರಣ ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ.
ತ್ರಿಪುರಾದ ಸೆಪಾಹಿಜಾಲ ಜಿಲ್ಲೆಯ ಗಡಿಯ ಹೊರಠಾಣೆ (ಬಿಒಪಿ) ಎನ್ ಸಿ ನಗರದ ಬಳಿ 81 ಬೆಟಾಲಿಯನ್ ಬಿಎಸ್ಎಫ್ ಈ ಕಾರ್ಯಾಚರಣೆ ನಡೆಸಿದ್ದು, ಅದರಲ್ಲಿ 172.828 ಕೆಜಿ ಚಿನ್ನ, 178.805 ಕೆಜಿ ಬೆಳ್ಳಿಯನ್ನೂ ಜಪ್ತಿ ಮಾಡಲಾಗಿದೆ. ನಿರ್ಧಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಬಿಎಸ್ಎಫ್ ಪಡೆಗಳು ಅಂತಾರಾಷ್ಟ್ರೀಯ ಗಡಿ ಯುದ್ಧಕ್ಕೂ ದಾಳಿ ನಡೆಸಿ ಈ ಮಾಲನ್ನು ವಶಪಡಿಸಲು ಸಫಲವಾಗಿದೆ. ರಾತ್ರಿ 8.45ರ ವೇಳೆಗೆ ಭಾರತ-ಬಾಂಗ್ಲಾ ದೇಶದ ಗಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕೆಲವರ ಚಲನವಲನ ವನ್ನು ಗಮನಿಸಿದ ಬಿಎಸ್ಎಫ್ ಜವಾನರು ಅವರನ್ನು ಪ್ರಶ್ನಿಸಿದಾಗ ಈ ಮಾಲು ಕಳ್ಳಸಾಗಾಟ ಮಾಡಿದ ಶಂಕಿತರು ಮಾಲನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಮಾಲನ್ನು ಬಿಎಸ್ಎಫ್ ವಶಕ್ಕೆ ತೆಗೆದುಕೊಂಡಿದೆ. ವಶಪಡಿಸಿಕೊಂಡ ಮಾಲುಗಳಲ್ಲಿ ಚಿನ್ನದ ಗಟ್ಟಿಗಳು, ಬಿಸ್ಕೆಟ್ಗಳು ಸೇರಿವೆ. ಇದನ್ನು ಬಳಿಕ ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ಕಸ್ಟಮ್ಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.