ಭಾರತ ವಿರೋಧಿ ಉಗ್ರ ಪಾಕಿಸ್ತಾನದಲ್ಲಿ ಹತ್ಯೆ
ಲಾಹೋರ್: ಭಾರತೀಯ ಸರಬ್ಜಿತ್ ಸಿಂಗ್‌ನನ್ನು ಜೈಲಿನಲ್ಲಿ ಹತ್ಯೆಗೈದ ಪಾಕಿಸ್ತಾನದ ಭೂಗತ ಪಾತಕಿಯನ್ನು ಇಬ್ಬರು ಅಪರಿಚಿತರು ಲಾಹೋರ್‌ನಲ್ಲಿ ಹತ್ಯೆಮಾಡಿದ್ದಾರೆ. ಪಾಕಿಸ್ತಾನದ ವಾಂಟೆಂಡ್ ಭೂಗತ ಪಾತಕಿಗಳಲ್ಲೊಬ್ಬ ನಾದ ಅಮೀರ್ ಸಫ್ರಾರ್ಜ್ ಅಲಿಯಾಸ್ ತಾಂಬೆ ಮೇಲೆ ಲಾಹೋರ್‌ನ ಇಸ್ಮಾಮ್‌ಪುರ ಪ್ರದೇಶದ ಅವರ ಮನೆಯಲ್ಲಿ ನಿನ್ನೆ ಮಧ್ಯಾಹ್ನ ಸುಮಾರು ೧.೩೦ಕ್ಕೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆನಡೆಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ.
೧೯೭೯ರಲ್ಲಿ ಲಾಹೋರ್‌ನಲ್ಲಿ ಜನಿಸಿದ ಅಮೀರ್‌ಸಫ್ರಾಜ್ ಲಷ್ಕರ್ ಇ ತೋಯ್ಬಾ ಸಂಸ್ಥಾಪಕನ ನಿಕಟವರ್ತಿಯಾಗಿದ್ದನು. ಜೈಲಿನಲ್ಲಿ ಸರಬ್ಜಿತ್ ಸಿಂಗ್‌ನನ್ನು ಹತ್ಯೆಗೈದ ಆರೋಪದ ಮೇಲೆ ಅಮೀರ್ ಸಫ್ರಾಜ್ ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಲಾಗಿತ್ತಾದರೂ ಸಾಕ್ಷ್ಯಾ ಧಾರಗಳ ಕೊರತೆ ಉಲ್ಲೇಖಿಸಿ ಪಾಕಿಸ್ತಾನ ನ್ಯಾಯಾಲಯ ೨೦೧೮ರಲ್ಲಿ ಅವರನ್ನು ಖುಲಾಸೆಗಳಿಸಿತ್ತು. ಲಾಹೋರ್ ಕಾ ಅಸ್ಲೀ ಡೋನ್ (ಲಾಹೋರ್‌ನ ನಿಜವಾದ ಡೋನ್) ಎಂದೇ ಕುಖ್ಯಾತನಾಗಿದ್ದ ಅಮೀರ್ ಸಫ್ರಾಜ್ ಟ್ರಕ್ಕೆನ್ ವಾಲಾ ಗ್ಯಾಂಗ್‌ನ ಮುಖ್ಯಸ್ಥನಾಗಿದ್ದಾನೆ. ಮಾತ್ರವಲ್ಲದೆ ಆಸ್ತಿ ವ್ಯಾಪಾರ ಮತ್ತು ಮಾದಕ ಕಳ್ಳಸಾಗಾಟದಲ್ಲೂ ತೊಡಗಿದ್ದನು.