ಭಾರೀ ಪ್ರಮಾಣದ ಪಾನ್ ಮಸಾಲೆ ಸಹಿತ ಓರ್ವ ಬಂಧನ

ಬದಿಯಡ್ಕ: ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದ ೩೪೨೮ ಪ್ಯಾಕೆಟ್ ಪಾನ್ ಮಸಾಲೆಯನ್ನು ವಶಪಡಿಸಿ ಕೊಂಡು ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಅರಿಯಪ್ಪಾಡಿ ಇಲಿಂಜಂ ಹೌಸ್ ನ ಅಬ್ದುಲ್ ಜಾಬಿರ್ ಎಂ.ಎಚ್ (28) ಎಂಬಾತನನ್ನು ಬದಿಯಡ್ಕ ಎಸ್ ಐ ಕೆ.ಆರ್. ಉಮೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ೬.೧೫ರ ವೇಳ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಮುಂಡಿತ್ತಡ್ಕ ಪಳ್ಳದ ಅಂಗಡಿಯೊಂದರ ಮುಂಭಾಗದ ರಸ್ತೆ ಬದಿ ಸಂಶಯಾಸ್ಪದ ರೀತಿಯಲ್ಲಿ ಗೋಣಿ ಚೀಲದಲ್ಲಿ ಮಾಲು ಸಹಿತ ಅಬ್ದುಲ್ ಜಾಬಿರ್ ನಿಂತಿದ್ದನು. ಗೋಣಿ ಚೀಲ ತೆರೆದು ಪರಿಶೀಲಿಸಿದಾಗ ಅದರಲ್ಲಿ  ಪಾನ್ ಮಸಾಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಬೇರೆಡೆಗೆ ಮಾರಾಟಕ್ಕಾಗಿ ಕೊಂಡೊ ಯ್ಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page