ಭೂಕುಸಿತ: ಅರ್ಜುನ್‌ಗಾಗಿ ಮತ್ತೆ ಶೋಧ

ಮಂಗಳೂರು: ಶಿರೂರಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ನಾಪತ್ತೆಯಾದ ಲಾರಿ ಚಾಲಕ ಕಲ್ಲಿಕೋಟೆಯ ಅರ್ಜುನ್‌ರ ಪತ್ತೆಗಾಗಿ ಮತ್ತೆ ಶೋಧ ಆರಂಭಿಸಲಾಗುವುದು.

ಗಂಗಾವಲಿ ಹೊಳೆಯಲ್ಲಿ ನಡೆಯುವ  ಶೋಧ ಕಾರ್ಯಕ್ಕೆ  ಗೋವಾದಿಂದ ಡ್ರಜ್ಜರ್ ತರಲಾಗುವುದು.  ಡ್ರಜ್ಜರ್ ತಲುಪಿಸಿ ಹೊಳೆಯ ಮಣ್ಣು ತೆರವುಗೊಳಿಸಿದ ಬಳಿಕ ಮತ್ತೆ ಶೋಧ ಕಾರ್ಯ ಆರಂಭಿಸಲಾಗುವುದು. ಇಂದು ಮಧ್ಯಾಹ್ನ ವೇಳೆ ಕಾರವಾರದಿಂದ ಡ್ರಜ್ಜರ್ ಒಳಗೊಂಡ ಟಗ್ ಬೋಟ್ ಶಿರೂರಿನತ್ತ ಪ್ರಯಾಣಿ ಸಲಿದೆ. ಇದೀಗಿನ ಸ್ಥಿತಿಗಳ ಕುರಿತು ಅವಲೋಕನ ನಡೆಸಲು ಉತ್ತರ ಕನ್ನಡ ಜಿಲ್ಲಾಡಳಿತ ಇಂದು ಸಭೆ ಸೇರಲಿದೆ.

You cannot copy contents of this page