ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷಪ್ರಾಶನ: ಸ್ಥಿತಿ ಗಂಭೀರ
ಕರಾಚಿ: ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಭಾರತಕ್ಕೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವ ಭೂಗತ ಪಾತಕಿ ಮೂಲತಃ ಮುಂಬೈ ನಿವಾಸಿ ಈಗ ಪಾಕಿಸ್ತಾನದ ಕರಾಚಿಯಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿರುವ ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ವಿಷಪ್ರಾಶನ ಮಾಡಿದ್ದು, ಆತನನ್ನು ಕರಾಚಿಯ ಆಸ್ಪತ್ರೆಯೊಂ ದರಲ್ಲಿ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆಯೆಂದು ವರದಿಯಾ ಗಿದೆ. ಆದರೆ ಪಾಕಿಸ್ತಾನ ಇದನ್ನು ಇನ್ನೂ ದೃಢೀಕರಿಸಿಲ್ಲ.
ಮೊದಲೇ ಕಾಯಿಲೆಯಿಂದ ಬಳಲುತ್ತಿದ್ದ ದಾವೂದ್ ಇಬ್ರಾಹಿಂ ವಿಷಪ್ರಾಶನ ಮಾಡಿದ್ದು, ವಿಷವನ್ನು ಆತ ಹಾಗೂ ವೈದ್ಯರ ಗಮನಕ್ಕೂ ಬಾರದ ರೀತಿಯಲ್ಲಿ ಯಾರೋ ಗುಪ್ತವಾಗಿ ಆತನಿಗೆ ನೀಡಿರಬಹುದೆಂಬ ಶಂಕೆಯೂ ಇದರ ಜತೆಗೆ ಉಂಟಾಗಿದೆ. ಕರಾಚಿ ಆಸ್ಪತ್ರೆಯ ಪ್ರತ್ಯೇಕ ಮಹಡಿಯಲ್ಲಿ ಮೊದಲು ದಾಖಲಿಸಲಾಗಿದ್ದ ದಾವೂದ್ ನನ್ನು ಬಳಿಕ ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿ ಈಗ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಆ ಆಸ್ಪತ್ರೆ ಹಾಗೂ ಪರಿಸರ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಪಾತಕಿ ದಾವೂದ್ ಇಬ್ರಾಹಿಂ ಅಗ್ರಸ್ಥಾನದಲ್ಲಿದ್ದಾನೆ. ಆತನ ಪತ್ತೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ೨೫ ಲಕ್ಷ ಬಹುಮಾನ ಘೋಷಿಸಿದೆ. ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಾಣಿಕೆ ಹಾಗೂ ಸಂಘಟಿತ ಅಪರಾಧ ಕೃತ್ಯ ಪ್ರಕರಣಗಳು ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳಲ್ಲಿ ದಾವೂದ್ ಇಬ್ರಾಹಿಂ ಪ್ರಮುಖ ಆರೋಪಿಯಾಗಿದ್ದಾನೆ. ಭಾರತ ಮತ್ತು ಅಮೆರಿಕಾದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಲ್ಪ ಟ್ಟಿರುವ ದಾವೂದ್ ಇಬ್ರಾಹಿಂ ಮುಂಬೈ ಸರಣಿ ಸ್ಫೋಟದ ಬಳಿಕ ಪಾಕಿಸ್ತಾನಕ್ಕೆ ಪಲಾಯನಗೈದು ಅಲ್ಲಿನ ಸರಕಾರದ ಪೂರ್ಣ ಸಂರಕ್ಷಣೆ ಹಾಗೂ ಭದ್ರತೆಗಳೊಂದಿಗೆ ದಶಕಗಳಿಂದ ಪಾಕ್‌ನ ಕರಾಚಿಯಲ್ಲೇ ನೆಲೆಸಿದ್ದಾನೆ. ಆತನನ್ನು ತಮಗೆ ಬಿಟ್ಟುಕೊಡುವಂತೆ ಭಾರತ ಹಲವು ಬಾರಿ ಪಾಕಿಸ್ತಾನ ದೊಂದಿಗೆ ಕೇಳಿಕೊಂಡಿತ್ತಾದರೂ, ದಾವೂದ್ ನಮ್ಮ ದೇಶದಲ್ಲಿ ವಾಸವಾಗಿ ಲ್ಲವೆಂಬ ಸುಳ್ಳು ಸಮಜಾಯಿಸಿಯನ್ನು ಪಾಕ್ ಸರಕಾರ ಈತನಕ ನೀಡುತ್ತಲೇ ಬಂದಿದೆ.
೧೯೯೩ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದಾನೆ ದಾವೂದ್ ಇಬ್ರಾಹಿಂ. ಈ ವಿನಾಶಕಾರಿ ಸರಣಿ ಬಾಂಬ್ ಸ್ಫೋಟದಲ್ಲಿ ೨೫೦ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡು ಸಾವಿರಾರು ಮಂದಿ ಗಾಯಗೊಂಡಿ ದ್ದರು. ಮಾತ್ರವಲ್ಲ ಭಾರೀ ನಾಶನಷ್ಟವೂ ಉಂಟಾಗಿದೆ. ಭಾರತದ ಮೋಸ್ಟ್ ವಾಂಟೆಂಡ್ ಉಗ್ರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಪಾಕ್ ಭಯೋತ್ಪಾದಕ ಸಂಘಟನೆಯ ಒಟ್ಟು ೨೧ ಮಂದಿಯನ್ನು ಪಾಕಿಸ್ತಾನದಲ್ಲೇ ಅಪರಿಚಿತರು ಇತ್ತೀಚೆಗೆ ಗುಂಡಿಕ್ಕಿ ಹತ್ಯೆಗೈದಿದ್ದರು. ಇದರಲ್ಲಿ ಓರ್ವ ಉಗ್ರನನ್ನು ಅಲ್ಲಿನ ಜೈಲಿನೊಳಗೆ ವಿಷನೀಡಿ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು. ಅಂತಹ ಸ್ಥಿತಿ ಈಗ ದಾವೂದ್ ಇಬ್ರಾಹಿಂ ಕೂಡಾ ಎದುರಿಸುತ್ತಿದ್ದಾನೆ.