ಭೂ ಕುಸಿತ: ರಕ್ಷಣಾ ಕಾರ್ಯ ಮುಂದುವರಿಕೆ; ಸಾವಿನ ಸಂಖ್ಯೆ 359ಕ್ಕೆ
ವಯನಾಡು: ವಯನಾಡು ಜಿಲ್ಲೆಯ ಮುಂಡಕೈ, ಚೂರಲ್‌ಮಲ ಎಂಬೀ ಪ್ರದೇಶಗಳಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಶೋಧ ಕಾರ್ಯ ಐದನೇ ದಿನವಾದ ಇಂದೂ ಮುಂದುವರಿಯುತ್ತಿದೆ. ದುರಂತದಿಂದ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಇನ್ನಷ್ಟು ಮಂದಿ ಅವಶಿಷ್ಟಗಳಡಿಯಲ್ಲಿ ಸಿಲುಕಿಕೊಂಡಿರಬಹುದೆಂದು ಅಂದಾಜಿಸಲಾಗಿದೆ. ಇದೇ ವೇಳೆ ದುರಂತದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 359ಕ್ಕೇರಿದೆ. ಇದರಲ್ಲಿ 20 ಮಂದಿ ಮಕ್ಕಳಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿಯನ್ನು ಇನ್ನೂ ಪತ್ತೆಹಚ್ಚಲು ಬಾಕಿಯಿದೆ ಎಂದು ತಿಳಿಸಲಾಗಿದೆ. ಆದರೆ ಈ ಪ್ರದೇಶದಲ್ಲಿ ಇದ್ದವರ ಕುರಿತು ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.