ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮುಖ್ಯಮಂತ್ರಿ, ಪುತ್ರಿ ವಿರುದ್ಧ ರಿವಿಶನ್ ಅರ್ಜಿಯಲ್ಲಿ ಅಮಿಕಸ್ ಕ್ಯೂರಿಯ ನೇಮಕ
ಕೊಚ್ಚಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪುತ್ರಿ ವೀಣಾ ತೆಕಂಡಿ ಹಾಗೂ ಉನ್ನತ ಅಧಿಕಾರಿಗಳು ಭ್ರಷ್ಟಾಚಾರ, ಅಧಿಕಾರ ದುರುಪಯೋಗ ನಡೆಸಿದ್ದಾರೆಂಬ ಆರೋಪದಂತೆ ತನಿಖೆಗೆ ಆದೇಶಿಸಲು ನಿರಾಕರಿಸಿದ ವಿಜಿಲೆನ್ಸ್ ನ್ಯಾಯಾಲಯದ ನಿಲುವಿನ ವಿರುದ್ಧದ ದೂರಿನಲ್ಲಿ ಕೇರಳ ಹೈಕೋರ್ಟ್ ಅಮಿಕಸ್ ಕ್ಯೂರಿಯನ್ನು ನೇಮಿಸಿದೆ. ಈ ಪ್ರಕರಣದಲ್ಲಿ ದೂರುಗಾರನಾದ ಗಿರೀಶ್ ಬಾಬು ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು.
ಮುಖ್ಯಮಂತ್ರಿಯ ಪುತ್ರಿ ಟಿ. ವೀಣಾರ ಮಾಲಕತ್ವದಲ್ಲಿರುವ ಬೆಂಗಳೂರಿನ ಟೆಕ್ನಾಲೋಜಿಕ್ ಸೊಲ್ಯುಶನ್ಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಗೆ ಸಿ.ಎಂ. ಆರ್.ಎಲ್ (ಕೊಚ್ಚಿನ ಮಿನರಲ್ಸ್ ಆಂಡ್ ರೀಟೈಲ್) ಕಂಪೆನಿ ೧.೭೨ ಕೋಟಿ ರೂಪಾಯಿಗಳನ್ನು ಕಾನೂನು ವಿರುದ್ಧವಾಗಿ ನೀಡಲಾಗಿದೆಯೆಂಬ ಇನ್‌ಕಂ ಟ್ಯಾಕ್ಸ್‌ನ ವರದಿಯ ಹಿನ್ನೆಲೆಯಲ್ಲಿ ಗಿರೀಶ್‌ಬಾಬು ಮೂವಾಟುಪುಳ ವಿಜಿಲೆನ್ಸ್ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಮುಖ್ಯಮಂತ್ರಿ ಹಾಗೂ ಮಗಳ ಹೊರತು ರಮೇಶ್ ಚೆನ್ನಿತ್ತಲ, ಕುಂಞಾಲಿಕುಟ್ಟಿ, ವಿ.ಕೆ. ಇಬ್ರಾಹಿಂ ಕುಂಞಿ, ಎ. ಗೋವಿಂದನ್ ಎಂಬಿವರೂ ಸಿಎಂಆರ್‌ಎಲ್‌ನಿಂದ ಹಣ ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ. ಸರಿಯಾದ ಪುರಾವೆಯಿಲ್ಲದೆ ಆರೋಪವನ್ನು ಮಾತ್ರವೇ ದೂರುಗಾರ ಉಲ್ಲೇಖಿಸಿದ್ದಾರೆಂದು ತಿಳಿಸಿ ವಿಜಿಲೆನ್ಸ್ ನ್ಯಾಯಾಲಯ ದೂರನ್ನು ತಿರಸ್ಕರಿಸಿದೆ. ಇದರ ವಿರುದ್ಧ ದೂರುಗಾರನಾದ ಗಿರೀಶ್‌ಬಾಬು ಹೈಕೋರ್ಟ್‌ನ್ನು ಸಮೀಪಿಸಿದ್ದರು. ಸಾಮಾಜಿಕ ಕಾರ್ಯಕರ್ತರು ಅವರ ಅಧಿಕೃತ ಸ್ಥಾನಗಳನ್ನು ದುರುಪಯೋ ಗಪಡಿಸಿ ಕೊಂಡಿದ್ದಾರೆಂದು ಆರೋ ಪಿಸಿ ವಿಜಿಲೆನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ದೂರುಗಾರ ರಿವಿಶನ್ ಪಿಟಿಶನ್ ನೀಡಿದ್ದರು.