ಮಂಗಲ್ಪಾಡಿಯಲ್ಲಿ ತಾಲೂಕು ಆಸ್ಪತ್ರೆಗೆ ಹೊಸ ಕಟ್ಟಡ: ಆರೋಗ್ಯ ಸಚಿವೆಯಿಂದ ಕಾಮಗಾರಿ ಉದ್ಘಾಟನೆ
ಉಪ್ಪಳ: ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಕಿಫ್‌ಬಿ ಫಂಡ್ ಉಪಯೋಗಿಸಿ ನಿರ್ಮಿಸುವ ಆಧುನಿಕ ರೀತಿಯ ಕಟ್ಟಡದ ನಿರ್ಮಾಣ ಉದ್ಘಾಟನೆಯನ್ನು ಆರೋಗ್ಯ ಇಲಾಖೆ ಸಚಿವೆ ವೀಣಾ ಜೋರ್ಜ್ ವೀಡಿಯೋ ಕಾನ್ಫರೆನ್ಸ್ ಮೂಲಕ ನಿರ್ವಹಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿ ದರು. 17.47 ಕೋಟಿ ರೂ. ವೆಚ್ಚದಲ್ಲಿ ೨೬೦೦೦ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸುವ ಎರಡು ಮಹಡಿ ಕಟ್ಟಡದಲ್ಲಿ ಒಪಿ, ಕ್ಯಾಶ್ವಾಲಿಟಿ, ಮೈನರ್ ಒಟಿ, ಫಾರ್ಮಸಿ, ಎರಡು ಹೊರ ರೋಗಿ ತಪಾಸಣೆ ಕೊಠಡಿಗಳು, ಸ್ಟಾಫ್ ರೂಂ, ವಿಚಾರಣೆ, ಸ್ವಾಗತ ಕೌಂಟರ್ ಗಳು, ವಿಶ್ರಾಂತಿ ಕೇಂದ್ರ, ಪೊಲೀಸ್ ಐಡ್ ಪೋಸ್ಟ್, ಶೌಚಾಲಯ ಎಂಬೀ ಸೌಕರ್ಯಗಳನ್ನು ಸಿದ್ಧಪಡಿಸಲಾಗುವುದು. 15 ತಿಂಗಳೊಳಗೆ ಕಾಮಗಾರಿ ಪೂರ್ತಿಗೊಳಿಸಲು ಕರಾರು ನೀಡ ಲಾಗಿದೆ. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನ ಸ್ವಾಗತಿಸಿದರು. ಡಾ. ರಾಮದಾಸ್ ಎ.ವಿ. ವರದಿ ಮಂಡಿಸಿದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನಾ ನಾಫಲ್, ಮಂಜೇಶ್ವರ ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ, ಜಿಲ್ಲಾ ಪಂ. ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್, ಬ್ಲೋಕ್ ಪಂ. ಉಪಾಧ್ಯಕ್ಷ ಪಿ.ಕೆ. ಮುಹಮ್ಮದ್ ಹನೀಫ್, ಬ್ಲೋಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಶಂಸೀನಾ ಎ. ಮೊದಲಾದವರು ಮಾತನಾಡಿದರು.