ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಆರಂಭ: ಕುಣಿತ ಭಜನೆ ಸ್ಪರ್ಧೆ ನಾಳೆ
ಉಪ್ಪಳ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ 38ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಪಂಚಗವ್ಯ, ಪುಣ್ಯಾಹ, ಗಣಪತಿ ಹೋಮ, ವಿಗ್ರಹ ಪ್ರತಿಷ್ಠೆ, ಪೂಜೆ, ದ್ವಜಾರೋಹಣ, ಭಜನೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ 5ರಿಂದ ಭಜನೆ, ರಾತ್ರಿ 7ರಿಂದ ವಿಧುಷಿ ಡಾ.ಸುಚಿತ್ರಾ ಹೊಳ್ಳ ಇವರ ಶಿಷ್ಯೆ ವೃಂದದವರಿAದ ಗೋಷ್ಟಿಗಾಯನ, 8ರಿಂದ ಕೀರ್ತನಕುಟೀರ ಕುಂಬಳೆ ಇದರ ಶಿಷ್ಯೆ ವೃಂದದವ ರಿಂದ ಹರಿಕಥೆ, ರಾತ್ರಿ 9.30ಕ್ಕೆ ಮಹಾಪೂಜೆ, 9.40ರಿಂದ ಊರ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮ, 10ರಂದು ಬೆಳಿಗ್ಗೆ 8ಕ್ಕೆ ಪೂಜೆ, 9ರಿಂದ ವಿವಿಧ ತಂಡಗಳಿAದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 7ರಿಂದ ಕಲಾಕುಂಚ ಕೇರಳ ಗಡಿನಾಡಿನ ಘಟಕದ ವತಿಯಿಂದ ಶ್ರದ್ದಾ ಹಾಗೂ ಮೇಧಾ ಸಹೋದರಿಯರಿಂದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ, 8ರಿಂದ ಕುಣಿತ ಭಜನೆ ಸ್ಪರ್ಧೆ, 9.30ರಿಂದ ಮಹಾಪೂಜೆ, 11ರಂದು ಬೆಳಿಗ್ಗೆ 8ಕ್ಕೆ ಪೂಜೆ, 9ರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 12.30ರಿಂದ ಆಟೋಟ ಸ್ಪರ್ಧೆಗಳು, ಸಂಜೆ 5ರಿಂದ ಭಜನೆ, 6ರಿಂದ ದುರ್ಗಾನಮಸ್ಕಾರ ಪೂಜೆ, ರಾತ್ರಿ 7.30ರಿಂದ ಜಾನಪದ ನೃತ್ಯ ಸ್ಪರ್ಧೆ, 12ರಂದು ಬೆಳಿಗ್ಗೆ 8ಕ್ಕೆ ಪೂಜೆ, 8.15ಕ್ಕೆ ವಿದ್ಯಾರಂಭ, 9ಕ್ಕೆ ಆಯುಧ ಪೂಜೆ, 9.30ರಿಂದ ಭಜನೆ, ಬೆಳಿಗ್ಗೆ 11ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಸಮಿತಿ ಅಧ್ಯಕ್ಷ ಸುರೇಶ.ವಿ ಶೆಟ್ಟಿ ಪರಂಕಿಲ ಅಧ್ಯಕ್ಷತೆ ವಹಿಸುವರು. ವಿಜಯಲಕ್ಷಿ÷್ಮ ಚೆಕ್ಕೆಮನೆ ಧಾರ್ಮಿಕ ಭಾಷಣ ಮಾಡುವರು. ಪಟ್ಲ ದಾಮೋದರ ಶೆಟ್ಟಿ ಪಂಜಳ ಪುತ್ತಿಗೆ, ಶಶಿಕಾಂತ್ ಯೋಗಿಣಿ ಶಾರದಾನಗರ ಉಪಸ್ಥಿತರಿರುವರು. ಈ ವೇಳೆ ಬೊಳುವಾಯಿ ತಿಮ್ಮಪ್ಪ ಭಂಡಾರಿ ಮಡ್ವಬೀಡು ಇವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1ರಿಂದ ವಿಸರ್ಜನಾ ಪೂಜೆ, ಅನ್ನಸಂತರ್ಪಣೆ, 2.30ರಿಂದ ಶೋಭಾಯಾತ್ರೆ ನಡೆಯಲಿದೆ.