ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮುಂಭಾಗ ಧರಣಿ

ಮಂಗಲ್ಪಾಡಿ: ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯ ಅಭಿವೃದ್ಧಿ ಯನ್ನು ಬುಡಮೇಲುಗೊಳಿಸಲು ಕೆಲವು ಕೇಂದ್ರಗಳಿಂದ ಯತ್ನ ನಡೆಯು ತ್ತಿದೆಯೆಂದು ಆರೋಪಿಸಿ ಮಂಗಲ್ಪಾಡಿ ಜನಪರ ವೇದಿಕೆ ಇಂದು ಬೆಳಿಗ್ಗೆ ಆಸ್ಪತ್ರೆ ಮುಂಭಾಗ ಧರಣಿ ನಡೆಸಿದೆ. ಧರಣಿಯನ್ನು ಏಮ್ಸ್ ಜನಪರ ಒಕ್ಕೂಟ ಅಧ್ಯಕ್ಷ  ಗಣೇಶ ಅರಮಂಗಾನಂ ಉದ್ಘಾಟಿಸಿದರು. ಜನಪರ ವೇದಿಕೆ ಮಂಗಲ್ಪಾಡಿ ಇದರ ಅಧ್ಯಕ್ಷ ಕರೀಂ ಪೂನ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಸತ್ಯನ್ ಸಿ. ಉಪ್ಪಳ, ಸಲೀಂ ಚೌಕಿ, ಮೊಹಮ್ಮದ್ ಕೈಕಂಬ, ಸಿದ್ದಿಖ್ ಕೈಕಂಬ, ಮೊಹಮ್ಮದ್ ಸೀಗಂದಡಿ, ಅಶಾಖ್ ಮೂಸಾಕುಂಞಿ, ಶಾಜಹಾನ್ ಬಹರೈನ್, ರೈಸಾದ್ ಭಾಗವಹಿಸಿದರು.

You cannot copy contents of this page