ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲಿ ಚಿಕಿತ್ಸೆ ಮೊಟಕು: ಜನಕೀಯ ವೇದಿಯಿಂದ ಪ್ರತಿಭಟನೆ
ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲಿ ಐಪಿ, ತುರ್ತುನಿಗಾ ವಿಭಾಗವನ್ನು ಮೊಟಕು ಗೊಳಿಸಿರುವುದನ್ನು ಪ್ರತಿಭಟಿಸಿ ಜನಕೀಯ ವೇದಿ ಆಸ್ಪತ್ರೆಯ ಮುಂಭಾಗ ವಿನೂತನ ರೀತಿಯಲ್ಲಿ ಚಳವಳಿ ನಡೆಸಿತು. ವೈದ್ಯರು ಹಾಗೂ ಚಿಕಿತ್ಸೆಯಿಲ್ಲದ ಆಸ್ಪತ್ರೆಯ ಮುಂಭಾಗ ರೋಗಿಯನ್ನು ಮಲಗಿಸಿ ಸಮಾ ಧಾನಪಡಿಸುವ ದಯನೀಯ ಸ್ಥಿತಿ ಹಾಗೂ ಬಡವರಾದ ರೋಗಿಗಳ ಅಸಹನೀಯ ಕತೆಯನ್ನು ಚಳವಳಿಯಲ್ಲಿ ತೋರಿಸಲಾಯಿತು.
ಇಲಾಖೆಯ ಸಚಿವೆ ರಾಜ್ಯದಾ ದ್ಯಂತ ಸಂಚರಿಸಿ ಆಸ್ಪತ್ರೆಗಳಲ್ಲಿ ಆಧುನಿಕ ರೀತಿಯ ಸೌಕರ್ಯ ಗಳನ್ನು ಏರ್ಪಡಿಸುವುದಾಗಿ ಹೇಳುತ್ತಿ ರುವಾಗ ರಾಜ್ಯದ ಉತ್ತರ ಭಾಗದ ತುತ್ತ ತುದಿಯಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ಇರುವ ಸೌಕರ್ಯ ವನ್ನು ನಿಲುಗಡೆಗೊಳಿಸುವುದರ ವಿರುದ್ಧ ಜನರ ಪ್ರತಿಭಟನೆ ಚಳವಳಿಯಲ್ಲಿ ಕಂಡು ಬಂದಿದೆ. ಕರೀಂ ಪೂನ ಅಧ್ಯಕ್ಷತೆ ವಹಿಸಿದರು. ಅಶ್ರಫ್ ಬಡಾಜೆ, ಸಿ. ಸತ್ಯನ್, ಅಬ್ದುಲ್ ರಹಿಮಾನ್, ಸಿದ್ದಿಕ್ ಕೈಕಂಬ, ಒ.ಎಂ. ರಶೀದ್, ವಲ್ಸರಾಜ್, ಮಹಮೂದ್ ಕೈಕಂಬ, ಅಶ್ರಫ್, ಅಬುತಮಾಂ ಮಾತ ನಾಡಿದರು.