ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ ೨೮.೯೨ ಲಕ್ಷ ಲಾಭ, ಶೇ. ೧೫ ಡಿವಿಡೆಂಟ್ ಘೋಷಣೆ
ಮಂಗಲ್ಪಾಡಿ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ೨೦೨೨ -೨೦೨೩ನೇ ಸಾಲಿನಲ್ಲಿ ೨೮.೯೨ ಲಕ್ಷ ಲಾಭ ಗಳಿಸಿದ್ದು ಸದಸ್ಯರಿಗೆ ೧೫ ಶೇ. ಡಿವಿಡೆಂಟನ್ನು ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಐಲ ಘೋಷಿಸಿದರು. ಶನಿ ವಾರ ಬ್ಯಾಂಕಿನ ಸಮೀಪ ಇರುವ ಜಿ ಎಚ್ ಡಬ್ಲ್ಯೂ ಎಲ್ ಪಿ ಶಾಲೆಯಲ್ಲಿ ಜರಗಿದ ಬ್ಯಾಂಕಿನ ವಾರ್ಷಿಕ ಮಹಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಟ್ಟು ೭೪.೦೭ ಕೋಟಿ ಸಾಲ ವಿತರಣೆ ಮಾಡಿ ಸಾಲ ವಸೂಲಾತಿಯಲ್ಲಿ ೯೩ ಶೇ. ಶೇಕಡ ಪ್ರಗತಿ ಸಾಧಿಸಿ ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ಎ ಗ್ರೇಡ್ ಪಡೆದಿದೆ ಎಂದರು. ಮುಂದಿನ ವರ್ಷದಲ್ಲಿ೧೦೦ ಕೋಟಿ ಸಾಲ ವಿತರಣೆ ಗುರಿಯನ್ನು ಹೊಂದಿದೆ ಎಂದರು. ಇದೇ ಸಂದ ರ್ಭದಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಬ್ಯಾಂಕಿನ ಸಿಬ್ಬಂದಿಗಳ ಮಕ್ಕಳಾದ ವೃಷ್ಟಿ. ಎಸ್. ಶೆಟ್ಟಿ, ಸುರಕ್ಷಾರನ್ನು ಗೌರವಿಸಲಾಯಿತು.
ಶತಮಾನೋತ್ಸವ ಆಚರಣೆಯ ತಯಾರಿಯಲ್ಲಿರುವ ಬೇಂಕಿನಲ್ಲಿ ಇದೇ ನವಂಬರ್ ೪ ರಂದುನಡೆಯಲಿರುವ ಕಾರ್ಯ ಯೋಜನೆಗಳ ಬಗ್ಗೆ ಬ್ಯಾಂಕಿನ ಉಪಾಧ್ಯಕ್ಷÀ ಎಂ.ಪಿ.ಬಾಲಕೃಷ್ಣ ಶೆಟ್ಟಿ ವಿವರಣೆ ನೀಡಿ ಆಮಂತ್ರಣ ಪತ್ರಿಕೆ ಯನ್ನು ಬ್ಯಾಂಕಿನ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಹೊಳ್ಳರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಿ ದರು. ಬ್ಯಾಂಕ್ನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯೆ ಜಯಂತಿ.ಟಿ.ಶೆಟ್ಟಿ ಸ್ವಾಗತಿಸಿ, ಸಿಬ್ಬಂದಿ ರಾಜೇಶ್ ವಂದಿಸಿದರು. ಸಚ್ಚಿದಾನಂದಶೆಟ್ಟಿ ನಿರೂಪಿಸಿದರು. ದಿನೇಶ್ ಮುಳಿಂಜ ಪ್ರತಿಭಾ ಪುರಸ್ಕಾರದ ಬಗ್ಗೆ ಮಾಹಿತಿ ನೀಡಿದರು. ಆಡಳಿತ ಮಂಡಳಿ ಸದಸ್ಯರಾದ ಭರತ್ ರೈ, ಶ್ರೀಧರ ಬೀರಿಗುಡ್ಡೆ, ಜಯಂತ.ವಿ, ಉದಯ ಗಾಂಬೀರ್, ರವೀಶ್ ಕೊಡಂಗೆ, ರಾಮ, ಪ್ರೇಮಲತ, ರೇಖ ಉಪಸ್ಥಿತರಿದ್ದರು.