ಮಂಗಳೂರಿನಲ್ಲಿ ಜಾನಪದ ಸ್ಪರ್ಧಾಕೂಟ: ಕನ್ನೆಪ್ಪಾಡಿ ಬೊಳಿಕೆ ತಂಡಕ್ಕೆ ದ್ವಿತೀಯ ಸ್ಥಾನ

ಬದಿಯಡ್ಕ: ಮಂಗಳೂರಿನಲ್ಲಿ ನಡೆದ ಜಾನಪದ ಸ್ಪರ್ಧಾಕೂಟದಲ್ಲಿ ಮೊಗೇರರ ದುಡಿ ಕುಣಿತ ಮತ್ತು ದೂಪಬಲಿ ಪ್ರಸ್ತುತಪಡಿಸಿದ ಕನ್ನೆಪ್ಪಾಡಿ ಜಾನಪದ ಕಲಾಸಂಘಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಜಾನಪದ ಕÀಲೋತ್ಸವ, ಜಾನಪದ ಕಲಾಪ್ರದರ್ಶನ, ಆಹಾರ ಮೇಳದಂಗ ವಾಗಿ ಸ್ಪರ್ಧೆಯನ್ನು ಏರ್ಪಡಿಸ ಲಾಗಿತ್ತು. ಮಂಗಳೂರು ಪುರಭವನ ದಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು ಇಪ್ಪತ್ತು ತಂಡಗಳು ಭಾಗವಹಿಸಿದ್ದವು. ಜಾನಪದ ಕಲಾವಿದ ಶಂಕರ ಸ್ವಾಮಿಕೃಪಾ ನೇತೃತ್ವದ ಬೊಳಿಕೆ ಜಾನಪದ ಕಲಾಸಂಘದಲ್ಲಿ ಬಾಬು ಶೇಂತಾರು, ಯಶೋದಾ ಸ್ವಾಮಿಕೃಪಾ, ಹರೀಶ್ ಎಂ.ಕೆ., ಸುನಿಲ್ ಕುಮಾರ್ ಮುಣ್ಚಿಕ್ಕಾನ, ರಾಕೇಶ್ ಮುಣ್ಚಿಕ್ಕಾನ, ಯಜ್ಞುಷಾ ಸ್ವಾಮಿಕೃಪಾ, ಶಂಕರ ಕೊಲ್ಲಂಗಾನ, ಶ್ರಮಿತ್ ಶೇಂತಾರು, ಡಿಕಿಶ್ ರಾಜ್ ಸ್ವಾಮಿಕೃಪಾ ಅಭಿನಯಿಸಿದ್ದರು.

You cannot copy contents of this page