ಮಂಗಳೂರು: ಮಂಗಳೂರು ಕೊಡಿಯಾಲ್ ಬೈಲ್‌ನಲ್ಲಿರುವ ಜೈಲಿಗೆ ಇಂದು ಮುಂಜಾನೆ 150 ಪೊಲೀಸರು ಏಕಕಾಲದಲ್ಲಿ ದಾಳಿ ಕಾರ್ಯಾಚರಣೆ ನಡೆಸಿದ್ದು, ಅದರಲ್ಲಿ ಭಾರೀ ಪ್ರಮಾಣದ ಡ್ರಗ್, ಗಾಂಜಾ, ಮೊಬೈಲ್ ಫೋನ್ ಇತ್ಯಾದಿಗಳನ್ನು ಪತ್ತೆಹಚ್ಚಲಾಗಿದೆ.
ದಾಳಿಯಲ್ಲಿ 25 ಮೊಬೈಲ್ ಫೋನ್‌ಗಳು, ಒಂದು ಬ್ಲೂಟೂತ್ ಡಿವೈಸ್, ಐದು ಇಯರ್ ಫೋನ್, ಒಂದು ಪೆನ್‌ಡ್ರೈವ್, ಐದು ಚಾರ್ಜರ್, ಒಂದು ಕರ್ತರಿ ಸೇರಿದಂತೆ ಹಲವು ಸಾಮಗ್ರಿಗಳನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.ಜೈಲಿನಲ್ಲಿ ಕಳೆಯುತ್ತಿರುವ ಖೈದಿಗಳ ಪೈಕಿ ಕೆಲವರಿಂದ ಗಾಂಜಾ ಮತ್ತು ಡ್ರಗ್ಸ್ ಪ್ಯಾಕೆಟ್‌ಗಳನ್ನು ಕೂಡಾ ಪತ್ತೆಹಚ್ಚ ಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್‌ರ ಆದೇಶದಂತೆ ಈ ಪೊಲೀಸ್ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಎಸಿಪಿಗಳು ಮತ್ತು 21 ಇನ್ಸ್‌ಪೆಕ್ಟರ್‌ಗಳು, ಮತ್ತು 150 ಪೊಲೀಸರು ಭಾಗವಹಿಸಿದರು






